ADVERTISEMENT

ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:35 IST
Last Updated 24 ಡಿಸೆಂಬರ್ 2025, 7:35 IST
<div class="paragraphs"><p>ಶಿರಾದಲ್ಲಿ ಮಂಗಳವಾರ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಂಜಿನ ಮೆರವಣಿಗೆ ನಡೆಸಿದರು</p></div>

ಶಿರಾದಲ್ಲಿ ಮಂಗಳವಾರ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಂಜಿನ ಮೆರವಣಿಗೆ ನಡೆಸಿದರು

   

ಶಿರಾ: ಶಾಸಕ‌ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿ ಮಂಗಳವಾರ ಕುಂಚಿಟಿಗರ ಸಂಘ ಹಾಗೂ ವಿವಿಧ ಸಂಘಟನೆಗಳು ಪಂಜಿನ ಮೆರವಣಿಗೆ ನಡೆಸಿದರು.

ನಗರದ ಪ್ರವಾಸಿ ಮಂದಿರ ವೃತ್ತದಿಂದ ಪಂಜಿನ ಮೆರವಣಿಗೆ ಪ್ರಾರಂಭಿಸಿ ನಗರಸಭೆ ರಸ್ತೆಯ ಮೂಲಕ ನಾರಾಯಣ ಸ್ವಾಮಿ ಕಲ್ಯಾಣ ಮಂಟಪ, ಖಾಸಗಿ ಬಸ್ ನಿಲ್ದಾಣದ ಮೂಲಕ ಪ್ರವಾಸಿ ಮಂದಿರದ ವೃತ್ತಕ್ಕೆ ವಾಪಸ್‌ ಬಂದರು.

ADVERTISEMENT

ಶಾಸಕ ಟಿ.ಬಿ‌.ಜಯಚಂದ್ರ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಹಿರಿಯ ರಾಜಕಾರಣಿಯಾಗಿದ್ದು 50 ವರ್ಷಗಳ ರಾಜಕೀಯ ಅನುಭವವಿದೆ. ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಅವರ ಕೊಡುಗೆ ಪಕ್ಷಕ್ಕೆ ಅಪಾರವಾಗಿದೆ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಘೋಷಣೆ ಕೂಗಿದರು.

ಕುಂಚಿಟಿಗರ ಸಂಘದ ಅಧ್ಯಕ್ಷ ಕೆ‌.ಎಲ್.ಮುಕುಂದಪ್, ಪ್ರಧಾನ ಕಾರ್ಯದರ್ಶಿ ಬಿ.ಆರ್.ಜನಾರ್ಧನ್, ಎಚ್.ಗುರುಮೂರ್ತಿಗೌಡ, ಎಂ.ಆರ್.ಶಶಿಧರ್ ಗೌಡ, ಡಿ.ಸಿ.ಆಶೋಕ್, ಬಿ.ಎಂ.ರಾಧಕೃಷ್ಣ, ಗುಳಿಗೇನಹಳ್ಳಿ ನಾಗರಾಜು, ಎಂ.ರಂಗನಾಥ್, ಜಾಫರ್, ಮಹೇಂದ್ರ ಗೌಡ, ಸೀಗಲಹಳ್ಳಿ ವೀರೇಂದ್ರ, ಷಣ್ಮುಖಪ್ಪ, ಮದ್ದಾಕನಹಳ್ಳಿ ತಿಪ್ಪೇಸ್ವಾಮಿ, ಗೋವಿಂದರಾಜು, ಗೋಪಾಲ್, ಬಾಲೇನಹಳ್ಳಿ ಪ್ರಕಾಶ್, ಕೋಟೆ ಲೋಕೇಶ್, ರಾಕೇಶ್ ಬಾಬು, ಶ್ರೀರಂಗಪ್ಪ, ಮಧುಸೂಧನ್, ಸುದರ್ಶನ್, ಶೋಭಾ ನಾಗರಾಜು, ಮಂಜುಳಾ ಬಾಯಿ, ಜಯಲಕ್ಷ್ಮಿ, ಪಿ.ಬಿ‌.ನರಸಿಂಹಯ್ಯ, ಮಹೇಶ್ ಕುಮಾರ್, ಸತ್ಯನಾರಾಯಣ, ಮಣಿಕಂಠ ಹಾಜರಿದ್ದರು.

ಶಿರಾದಲ್ಲಿ ಮಂಗಳವಾರ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಂಜಿನ ಮೆರವಣಿಗೆ ನಡೆಸಿದರು
ಶಿರಾದಲ್ಲಿ ಮಂಗಳವಾರ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಂಜಿನ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.