ತುರುವೇಕೆರೆ: ಆರೋಪಿಯೊಬ್ಬನ ಮೊಬೈಲ್‌ನಿಂದ ಆನ್‌ಲೈನ್ ಬೆಟ್ಟಿಂಗ್ ಆಡಿದ ಆರೋಪದ ಮೇಲೆ ಪಟ್ಟಣದ ಪಿಎಸ್‌ಐ ಸಂಗಮೇಶ ಮೇಟಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.
ಪ್ರಕರಣವೊಂದರ ಆರೋಪಿಯೊಬ್ಬನನ್ನು ಜೈಲಿಗೆ ಬಿಡಬೇಕಾದ ಸಂದರ್ಭದಲ್ಲಿ ಆತನಿಂದ ಮೊಬೈಲ್ ಮತ್ತು ಫೊನ್ ಪೇ ಪಾಸ್‌ವರ್ಡ್ ಪಡೆದ ಸಂಗಮೇಶ್ ಮೇಟಿ ಆನ್‌ಲೈನ್ ಬೆಟ್ಟಿಂಗ್ ಆಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
‘ಸಬ್ ಇನ್‌ಸ್ಪೆಕ್ಟರ್ ಸಂಗಮೇಶ ಮೇಟಿ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಆಡಲು ನನ್ನ ಮೊಬೈಲ್ ಬಳಸಿದ್ದಾರೆ. ನನ್ನ ಫೋನ್ ಪೇನಲ್ಲಿದ್ದ ಸುಮಾರು ₹95 ಸಾವಿರ ದುರುಪಯೋಗಪಡಿಸಿಕೊಳ್ಳಲಾಗಿದೆ’ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆರೋಪಿ ದೂರು ಸಲ್ಲಿಸಿದ್ದ.
ಆರೋಪಿ ದೂರಿನ ತನಿಖೆ ಮಾಡಿದಾಗ, ಆರೋಪಿಯ ಮೊಬೈಲ್‌ನಿಂದ ಸಬ್ ಇನ್‌ಸ್ಪೆಕ್ಟರ್ ಆನ್‌ಲೈನ್ ಬೆಟ್ಟಿಂಗ್‌ಗಾಗಿ ಆತನ ₹95 ಸಾವಿರ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.