ADVERTISEMENT

ಶೈವ ಧರ್ಮದ ಮೂಲ ಕರ್ತೃ ರೇಣುಕಾಚಾರ್ಯ: ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:08 IST
Last Updated 2 ಮಾರ್ಚ್ 2026, 6:08 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ ನಡೆದ&nbsp;ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು&nbsp;ಕರಿವೃಷಭ ದೇಶೀಕೇಂದ್ರ&nbsp;ಸ್ವಾಮೀಜಿ ಉದ್ಘಾಟಿಸಿದರು. </p></div>

ತುಮಕೂರಿನಲ್ಲಿ ಭಾನುವಾರ ನಡೆದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.

   

ತುಮಕೂರು: ಶೈವ ಧರ್ಮದ ಮೂಲ ಕರ್ತೃ ರೇಣುಕಾಚಾರ್ಯರು. ಧರ್ಮದಿಂದಲೇ ವಿಶ್ವ ಶಾಂತಿ ಎಂಬ ಅವರ ಮಾತು ನಾವೆಲ್ಲರೂ ಪಾಲಿಸಬೇಕು ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯತ ಸಮಾಜದ ಸಂಘ–ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ‘ರೇಣುಕಾಚಾರ್ಯ ಜಯಂತಿ ವೀರಶೈವ ಲಿಂಗಾಯತ ಸಮುದಾಯದ ಯುವ ಜನರು, ಹಿರಿಯರು ಪರಸ್ಪರ ಒಗ್ಗೂಡಿ ಕೆಲಸ ಮಾಡಲು ಸಹಕಾರಿಯಾಗಿದೆ’ ಎಂದರು.

ತಹಶೀಲ್ದಾರ್‌ ಪಿ.ಎಸ್‌.ರಾಜೇಶ್ವರಿ, ‘ವೀರಶೈವ ಧರ್ಮದ ಶಿಕ್ಷಣ, ದಾಸೋಹದಲ್ಲಿ ಎತ್ತಿದ ಕೈ. ತ್ರಿವಿಧ ದಾಸೋಹದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕವಾಗಿ ಸಮಾಜಕ್ಕೆ ಕೊಡುಗೆ ನೀಡಿದೆ’ ಎಂದು ತಿಳಿಸಿದರು.

ಅರಳೆಪೇಟೆಯ ಬಸವೇಶ್ವರ ದೇವಾಲಯದಿಂದ ಭದ್ರಮ್ಮ ಛತ್ರ ವೃತ್ತದ ವರೆಗೆ ರೇಣುಕಾಚಾರ್ಯರ ಮೆರವಣಿಗೆ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಕೋರಿ ಮಂಜುನಾಥ್, ಟಿ.ಆರ್.ಸದಾಶಿವಯ್ಯ, ಕೆ.ಜಿ.ರುದ್ರಪ್ಪ, ಬಾವಿಕಟ್ಟೆ ಮಂಜುನಾಥ್, ಟಿ.ಸಿ.ಓಹಿಲೇಶ್ವರ್, ಜಿ.ಎಸ್.ಸಿದ್ದರಾಜು, ಗಂಗಾಧರಶಾಸ್ತ್ರಿ, ಜಿ.ಎಸ್.ರವಿಶಂಕರ್, ಜಿ.ಮಲ್ಲಿಕಾರ್ಜುನಯ್ಯ, ಕೆ.ಎಲ್‌.ದರ್ಶನ್, ಕನ್ನಡ ಪ್ರಕಾಶ್‌, ದರ್ಶನಕುಮಾರ್‌, ಶೈಲಾ ಶಿವಕುಮಾರ್, ಮಮತಾ ದಿವಾಕರ್, ಕರುಣಾರಾಧ್ಯ, ಸಿದ್ದಲಿಂಗಸ್ವಾಮಿ ಇತರರು ಹಾಜರಿದ್ದರು.