ADVERTISEMENT

ಕೊರಟಗೆರೆಯಲ್ಲಿ ಈ ಗ್ರಾಮಗಳಲ್ಲಿ ಕುಡಿಯಲು ಚಾವಣಿ ನೀರೆ ಆಸರೆ

ವೆಂಗಳಮ್ಮನಹಳ್ಳಿ ಹಾಗೂ ಮೋಟಗೊಂಡನಹಳ್ಳಿಯಲ್ಲಿ ನೀರಿನ ಬವಣೆ

ಎ.ಆರ್.ಚಿದಂಬರ
Published 8 ಜೂನ್ 2020, 6:13 IST
Last Updated 8 ಜೂನ್ 2020, 6:13 IST
ಕುಡಿಯುವ ನೀರಿಗೆ ಕಾಯುತ್ತಿರುವ ಮೋಟಗೊಂಡನಹಳ್ಳಿ ಗ್ರಾಮಸ್ಥರು
ಕುಡಿಯುವ ನೀರಿಗೆ ಕಾಯುತ್ತಿರುವ ಮೋಟಗೊಂಡನಹಳ್ಳಿ ಗ್ರಾಮಸ್ಥರು   

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಪಾತಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಗಳ
ಮ್ಮನಹಳ್ಳಿ ಹಾಗೂ ಮೋಟಗೊಂಡನಹಳ್ಳಿ ಜನರು ಕಳೆದು ಮೂರು ತಿಂಗಳಿ ನಿಂದ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.

ಕೊಳವೆ ಬಾವಿಯಲ್ಲಿ ನೀರು ಕುಸಿದಿದೆ. ಮೂರು ದಿನಕ್ಕೆ ಒಮ್ಮೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಮಳೆ ಬಂದರೆ ಮನೆಯ ಚಾವಣಿ
ನೀರು ಹಿಡಿದಿಟ್ಟು ಕುಡಿಯಲು ಬಳಸುತ್ತಿದ್ದಾರೆ.

ಈ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಗ್ರಾಮ ಪಂಚಾಯಿತಿಯಿಂದ 7 ಕೊಳವೆ ಬಾವಿ ಕೊರೆಸಲಾಗಿದೆ. ಆದರೂ ಹನಿ ನೀರಿಲ್ಲ. ಮಳೆ ನೀರುನ್ನು ಮನೆಯ ಪಾತ್ರೆಗಳಲ್ಲಿ ಶೇಖರಿಸಿ ಅದನ್ನು ಕುಡಿಯಲು ಬಳಸುತ್ತಿದ್ದಾರೆ.

ADVERTISEMENT

ಈ ಭಾಗದಲ್ಲಿ ಕೊಳವೆ ಬಾವಿ ಬತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಸರಿಯಾದ ಸಮಯಕ್ಕೆ ಟ್ಯಾಂಕರ್‌ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೋಟಗೊಂಡನಹಳ್ಳಿ ಮತ್ತು ವೆಂಗಳಮ್ಮನಹಳ್ಳಿ ಗ್ರಾಮದಲ್ಲಿನ 11 ನೀರಿನ ಟ್ಯಾಂಕಿನ ಸುತ್ತ ಗಿಡಗಂಟಿ ಬೆಳೆದಿವೆ. ಪಾತಗಾನಹಳ್ಳಿ ಗ್ರಾಮ ಪಂಚಾಯಿತಿಯಿಂದ ಹೊಸದಾಗಿ ಕೊರೆಸಿದ 3 ಕೊಳವೆ ಬಾಯಿಯಲ್ಲಿ ನೀರು ಸಿಕ್ಕಿಲ್ಲ. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ.

ಈ ಬಗ್ಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುವರು.

ಕೈಗೆ ಸಿಕ್ಕದ ಅಧಿಕಾರಿಗಳು: ಗ್ರಾಮ ಪಂಚಾಯಿತಿಯಿಂದ ಈ ಎರಡು ಗ್ರಾಮಗಳಿಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ತಹಶೀಲ್ದಾರ್ ಅವರನ್ನು ಕೇಳಿದರೆ ನೀರು ಪೂರೈಕೆ ಇಲಾಖೆ ಎಇಇಗೆ ಬಳಿ ಹೋಗಿ ಎನ್ನುತ್ತಾರೆ. ಹೊಸದಾಗಿ ಬಂದಿರುವ ಎಇಇ ಸಮರ್ಪಕ ಉತ್ತರ ನೀಡುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೈಗೆ ಸಿಕ್ಕುತ್ತಿಲ್ಲ ಎಂದು ಪಾತಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ ದೂರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.