ಗುಬ್ಬಿ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ತಹಶೀಲ್ದಾರ್ ವಸತಿಗೃಹದ ಆವರಣದಲ್ಲಿದ್ದ ಗಂಧದ ಮರಗಳ ಪೈಕಿ ಒಂದನ್ನು ಮಧ್ಯ ಭಾಗದವರೆಗೆ ಕೊಯ್ದು, ಮತ್ತೊಂದನ್ನು ಬುಡಸಹಿತ ಕಡಿದು ಕದ್ದೊಯ್ದಿದ್ದಾರೆ.
ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಎದುರಿನ ವಸತಿ ಗೃಹದಲ್ಲಿ ಕಳ್ಳರು ಗಂಧದ ಮರ ಕೊಯ್ದು ಹಾಕಿದ್ದಾರೆ.
ಪಟ್ಟಣದ ಹಳೆ ಏ.ಕೆ. ಕಾಲೊನಿ ಬಳಿಯ ಸರ್ಕಾರಿ ಶಾಲೆಯ ಮುಂಭಾಗವಿದ್ದ ಗಂಧದ ಮರವನ್ನೂ ಕಡಿದು ಬುಡವನ್ನು ಕದ್ದು ಒಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.