ಕೊರಟಗೆರೆ: ದೇಶದ ಐಕ್ಯತೆ, ಸಮಗ್ರತೆಗೆ ಜಾತ್ಯತೀತ ವ್ಯವಸ್ಥೆ ಅಗತ್ಯ. ಜಾತ್ಯತೀತ ಆಡಳಿತ ನೀಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಶಾಸಕ ಡಾ.ಜಿ. ಪರಮೇಶ್ವರ ತಿಳಿಸಿದರು.
ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ಗೇರಹಳ್ಳಿಯಲ್ಲಿ ಮಧುಗಿರಿ ಮುಖ್ಯರಸ್ತೆಯಿಂದ ಗೇರಹಳ್ಳಿ ಮಾರ್ಗದ ₹50 ಲಕ್ಷ ವೆಚ್ಚದ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ವಿವಿಧ ಧರ್ಮ, ಭಾಷೆಯ 135 ಕೋಟಿ ಜನರು ಇದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲೂ ಭಾರತದಲ್ಲಿರುವ ವೈವಿಧ್ಯ ಸಂಸ್ಕೃತಿ ಮತ್ತು ಭಾಷೆಗಳಿಲ್ಲ. ಸಾವಿರಾರು ವರ್ಷಗಳಿಂದ ಜನರು ಇಲ್ಲಿ ಸಹಬಾಳ್ವೆ ಮಾಡುತ್ತಿರುವುದು ಭಾವೈಕ್ಯತೆ ಹಾಗೂ ಜಾತ್ಯತೀತತೆಯಿಂದ. ಇಂತಹ ಜಾತ್ಯತೀತ ವ್ಯವಸ್ಥೆಯನ್ನು ದೇಶದಲ್ಲಿ ಕಾಪಾಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.
ಗೇರಹಳ್ಳಿ ಗ್ರಾಮಕ್ಕೆ ಈಗಾಗಲೇ ಗ್ರಾಮ ವಿಕಾಸ್ ಯೋಜನೆಯಡಿ ₹50 ಲಕ್ಷ ಹಣ ಮಂಜೂರಾಗಿದೆ. ಇದರಲ್ಲಿ ಈಗಾಗಲೇ ₹23 ಲಕ್ಷ ಬಳ
ಕೆಯಾಗಿದೆ. ಬಾಕಿ ಮೊತ್ತ ತಾಂತ್ರಿಕ ತೊಂದರೆಯಿಂದ ನಿಧಾನವಾಗಿದೆ. ಗ್ರಾಮದ ಪ್ರಾರ್ಥನಾ ಮಂದಿರದ ಕಾಂಪೌಂಡ್‌ಗಾಗಿ ₹3 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ಮುಖಂಡರಾದ ಅಬ್ದುಲ್ ರಝಾಕ್, ಮೌಲನಾ, ಖಲೀಂಉಲ್ಲಾ, ಅಬ್ದುಲ್ ಅಲೀಂ, ಅಸ್ಲಾಂಪಾಷಾ, ಗ್ರಾ.ಪಂ ಅಧ್ಯಕ್ಷೆ ಸಾವಿತ್ರಮ್ಮ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್. ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಗಂಗಾಧರಪ್ಪ, ಪುಟ್ಟರಾಜು, ಅರವಿಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.