ADVERTISEMENT

ಆತ್ಮಸ್ಥೈರ್ಯವೇ ಮದ್ದು

ಕೊರೊನಾ ಸೋಂಕಿನಿಂದ ಗುಣಮುಖರಾದ ನವೀನ್ ಅಭಿಪ್ರಾಯ

ಸಿ.ಗುರುಮೂರ್ತಿ
Published 25 ಜುಲೈ 2020, 5:46 IST
Last Updated 25 ಜುಲೈ 2020, 5:46 IST
ನವೀನ್ ಕಾಡೇನಹಳ್ಳಿ
ನವೀನ್ ಕಾಡೇನಹಳ್ಳಿ   

ಚಿಕ್ಕನಾಯಕಹಳ್ಳಿ: ಆತ್ಮಸ್ಥೈರ್ಯ, ಸೂಕ್ತ ಸಮಯದಲ್ಲಿ ಔಷಧೋಪಚಾರ ಇದ್ದರೆ ಕೊರೊನಾವನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು. ಅದೊಂದು ಭಯಪಡುವ ಕಾಯಿಲೆಯೇ ಅಲ್ಲ...

–ಹೀಗೆಂದು ವಿಶ್ವಾಸದಿಂದ ನುಡಿಯುತ್ತಾರೆ ಸೋಂಕಿನಿಂದ ಗುಣಮುಖರಾದಕಾಡೇನಹಳ್ಳಿ ಯುವಕ ನವೀನ್.

ಕೊರೊನಾ ಬಂತೆಂದು ಎದೆಗುಂದುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸಿ, ನಿತ್ಯ ಬಿಸಿ ನೀರು, ಜೊತೆಗೊಂದಷ್ಟು ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವಿಸಿದರೆ ಶೀಘ್ರ ಗುಣಮುಖರಾಗಬಹುದು ಎನ್ನುವುದು ಅವರ ಅನುಭವದ ಮಾತು.

ADVERTISEMENT

ಪದವಿ ವಿದ್ಯಾರ್ಥಿಯಾಗಿರುವ ನವೀನ್‌, ಗ್ರಾಮದ ಮೊದಲ ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ವಾಲಿಬಾಲ್‌ ಆಟ ಆಡಿದ್ದರು. ಆ ವ್ಯ‌ಕ್ತಿಗೆ ಸೋಂಕು ದೃಢವಾದ ನಂತರ ನವೀನ್‌ ಅವರ ಗಂಟಲ ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. 12 ದಿನಗಳ ನಂತರ ಬಂದ ಪರೀಕ್ಷಾ ವರದಿಯಲ್ಲಿ ನವೀನ್‌ ಅವರಿಗೂ ಸೋಂಕು ಇರುವುದು ದೃಢಪಟ್ಟಿತ್ತು.

‘ಸೋಂಕು ದೃಢ‍ಪಟ್ಟ ತಕ್ಷಣ ನಾನು ಧೈರ್ಯಗುಂದಲಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಿದರು. ಅಲ್ಲಿ ನಮ್ಮೂರಿನವರೇ ಮೂವರು ಇದ್ದ ಕಾರಣ ಭಯವಾಗಲಿಲ್ಲ. ನಿತ್ಯ ಬೆಳಗ್ಗೆ ಏಳುತ್ತಿದ್ದಂತೆ ಬಿಸಿ ನೀರು ಕುಡಿಯುತ್ತಿದ್ದೆ. ಸೋಂಕು ಶೀಘ್ರ ವಾಸಿಯಾಗುತ್ತದೆ ಎಂದು ನನಗೇ ನಾನೇ ಆತ್ಮಸ್ಥೈರ್ಯ ತುಂಬಿಕೊಳ್ಳುತ್ತಿದೆ. ಅದೇ ನನ್ನನ್ನು ಬೇಗ ಗುಣವಾಗಿಸಿತು’ ಎನ್ನುವುದು ನವೀನ್ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.