ಮಧುಗಿರಿ: ಪಟ್ಟಣದ ಪೊಲೀಸ್ ಠಾಣೆ ಸಮೀಪವೇ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.
ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಉಪ ಕಾರಾಗೃಹ ಹಿಂಭಾಗದ ಎಸ್.ಎಂ. ಆಂಗ್ಲಶಾಲೆ ಸಮೀಪದಲ್ಲೇ ಇರುವ ಕಪೂರ್ ಸಾಬ್ ಮತ್ತು ಕರೀಮ್ ಸಾಬ್ ಮನೆಗಳಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಹಣ ಮತ್ತು ಬಂಗಾರದ ಒಡವೆ ದೋಚಿ ಪರಾರಿಯಾಗಿದ್ದಾರೆ.
ಕಪೂರ್ ಸಾಬ್ ಮನೆಯಲ್ಲಿ 7 ಗ್ರಾಂ ಬಂಗಾರದ ಒಡವೆ ಹಾಗೂ ₹30 ಸಾವಿರ ನಗದು ಮತ್ತು ಕರೀಮ್ ಸಾಬ್ ಮನೆಯಲ್ಲಿ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆಂದು ಇಟ್ಟಿದ್ದ ₹52 ಸಾವಿರ ನಗದು, ₹5 ಲಕ್ಷ ಮೌಲ್ಯದ ಒಡವೆ ದೋಚಿ ಪರಾರಿಯಾಗಿದ್ದಾರೆ.
ಕಾರಾಗ್ರಹ ಹಿಂಭಾಗದ ಗೋಡೆಗಳಿಗೆ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸರು ಸಿ.ಸಿ.ಕ್ಯಾಮೆರಾ ವಿಡಿಯೊ ಪರಿಶೀಲಿಸಿದ್ದಾರೆ.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.