ADVERTISEMENT

ಶಿರಾ: ರೆಡ್ ಕಾರ್ಪೆಟ್ ಹಾಸಿ ಮತದಾರರಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 6:15 IST
Last Updated 3 ನವೆಂಬರ್ 2020, 6:15 IST
ಮತಗಟ್ಟೆ ರೆಡ್ ಕಾರ್ಪೆಟ್ ಹಾಸಿರುವ ದೃಶ್ಯ
ಮತಗಟ್ಟೆ ರೆಡ್ ಕಾರ್ಪೆಟ್ ಹಾಸಿರುವ ದೃಶ್ಯ   
""

ತುಮಕೂರು: ಶಿರಾ ಉಪಚುನಾವಣೆ ಮತದಾನಕ್ಕೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮಾದರಿ ಮತಗಟ್ಟೆ ತೆರೆಯಲಾಗಿದೆ.

ತಮ್ಮ ಹಕ್ಕು ಚಲಾಯಿಸಲು ಬರುವ ಮತದಾರರನ್ನು ರೆಡ್ ಕಾರ್ಪೆಟ್ ಸ್ವಾಗತಿಸಿತು. ವೋಟ್ ಮಾಡಲು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಮತಗಟ್ಟೆಯನ್ನು ಬಲೂನ್‌ಗಳಿಂದ ಅಲಂಕರಿಸಲಾಗಿದ್ದು, ಮತಗಟ್ಟೆಯ ಹೊರಭಾಗದಲ್ಲಿ ಸೆಲ್ಫಿಗೆ ಅವಕಾಶ ನೀಡಲಾಗಿತ್ತು.

ADVERTISEMENT

ಈ ಮತಗಟ್ಟೆಗೆ ಬಂದವರಿಗೆ ಮಾಸ್ಕ್‌ನೀಡಿ, ಸ್ಯಾನಿಟೈಸ್ ಮಾಡಲಾಯಿತು. ಸಹಾಯವಾಣಿಯನ್ನೂ ತೆರೆಯಲಾಗಿತ್ತು.

ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮಾದರಿ ಮತಗಟ್ಟೆ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.