ADVERTISEMENT

ಶಿರಾ: ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:11 IST
Last Updated 16 ಡಿಸೆಂಬರ್ 2025, 5:11 IST
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಗುರುಗುಂಡ ಬ್ರಹ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಡಿತೇರು ಕಟ್ಟುವ ಉತ್ಸವಕ್ಕೆ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಗುರುಗುಂಡ ಬ್ರಹ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಡಿತೇರು ಕಟ್ಟುವ ಉತ್ಸವಕ್ಕೆ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು   

ಶಿರಾ: ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದು ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಗುರುಗುಂಡ ಬ್ರಹ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಓಂಕಾರೇಶ್ವರ ಜಾತ್ರಾ ಮಹೋತ್ಸವ ಜ. 3ರಿಂದ 15 ರವರೆಗೆ ನಡೆಯಲಿದೆ. ಜ. 9ರಂದು ಓಂಕಾರೇಶ್ವರ ಕಲ್ಲುಗಾಲಿ ರಥೋತ್ಸವ ನಡೆಯಲಿದೆ ಎಂದರು.

ADVERTISEMENT

ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನವನ್ನು ಇಲಾಖೆಗಳ‌ ಸಹಯೋಗದಲ್ಲಿ ಕಳೆದ 25 ವರ್ಷದಿಂದ ಏರ್ಪಡಿಸುತ್ತಿದ್ದು ರೈತರು ಪ್ರಯೋಜನ ಪಡೆಯಬೇಕು ಎಂದರು.

ತಮ್ಮಣ್ಣ, ಮಹೇಶ್, ವಿಜಯಕುಮಾರ್, ಮಂಜುನಾಥ ಸ್ವಾಮಿ, ಮೆಡಿಕಲ್ ಉಮೇಶ್, ರಾಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.