ADVERTISEMENT

ಶಿರಾ‌| 6 ಕೊಳವೆಬಾವಿ ಕೊರೆಸಿದರೂ ಬಾರದ ನೀರು: ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 10:57 IST
Last Updated 28 ಫೆಬ್ರುವರಿ 2026, 10:57 IST
<div class="paragraphs"><p>ರೈತ ಕೃಷ್ಣಪ್ಪ&nbsp;(64)</p></div>

ರೈತ ಕೃಷ್ಣಪ್ಪ (64)

   

ಶಿರಾ: ತಾಲ್ಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದಲ್ಲಿ ಸಾಲ ಮಾಡಿ 7 ಕೊಳವೆಬಾವಿ ಕೊರೆಸಿದ್ದ ರೈತ ಕೃಷ್ಣಪ್ಪ (64) ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಪ್ಪ 1.08 ಎಕರೆ ಭೂಮಿ ಹೊಂದಿದ್ದಾರೆ. ಪಟ್ಟನಾಯಕನಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ₹60 ಸಾವಿರ, ಬಂದಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹1 ಲಕ್ಷ, ಖಾಸಗಿಯವರು ಹಾಗೂ ಫೈನಾನ್ಸ್‌ ಕಂಪನಿಯಲ್ಲಿ ಸಾಲ ಮಾಡಿದ್ದರು. 7 ಕೊಳವೆಬಾವಿ ಕೊರೆಸಿದ್ದು, ಒಂದರಲ್ಲಿ ಮಾತ್ರ ನೀರು ಬರುತ್ತಿತ್ತು.

ಸಾಲ ತೀರಿಸಲು ಆಗದೆ ತಮ್ಮ ಜಮೀನಿನಲ್ಲಿರುವ ವಿದ್ಯುತ್‌ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.