ADVERTISEMENT

ತುಮಕೂರು: ಜಿಲ್ಲಾಸ್ಪತ್ರೆಗೆ ಸ್ಪಿರುಲಿನಾ ಮಾತ್ರೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 15:41 IST
Last Updated 14 ಮೇ 2020, 15:41 IST
ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಅವರಿಗೆ ಸ್ಪಿರುಲಿನಾ ಮಾತ್ರೆಗಳನ್ನುಮಹೇಶ್ ಹಸ್ತಾಂತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಇದ್ದಾರೆ
ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಅವರಿಗೆ ಸ್ಪಿರುಲಿನಾ ಮಾತ್ರೆಗಳನ್ನುಮಹೇಶ್ ಹಸ್ತಾಂತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಇದ್ದಾರೆ   

ತುಮಕೂರು: ಕೊರೊನಾ ಸೋಂಕು ತಡೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೊನಾ ಸೋಂಕಿತರು, ಶಂಕಿತರು, ವೈದ್ಯರು, ಶುಶ್ರೂಷಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಪ್ರತಿ ದಿನ 2 ಗ್ರಾಂ ಸ್ಪಿರುಲಿನಾ ಮಾತ್ರೆ ಸೇವಿಸಿ ಎಂದು ಸ್ಪಿರುಲಿನಾ ಫೌಂಡೇಷನ್ ಅಧ್ಯಕ್ಷ ಆರ್‌.ವಿ.ಮಹೇಶ್ ಸಲಹೆ ನೀಡಿದರು.

ಫೌಂಡೇಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆಗೆ 350 ಚಿಕ್ಕಿ ಪ್ಯಾಕೇಟ್ ಹಾಗೂ 150 ಬಾಕ್ಸ್ ಸ್ಪಿರುಲಿನಾ ಮಾತ್ರೆಗಳನ್ನು ಜಿಲ್ಲಾಸ್ಪತ್ರೆಗೆ ನೀಡಿ ಮಾತನಾಡಿದರು.

ಸ್ಪಿರುಲಿನಾ ಒಂದು ಸೂಕ್ಷ್ಮಾಣು ಜೀವಿ. ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಯಾವುದೇ ಸೋಂಕನ್ನು ಪ್ರತಿರೋಧಿಸುವಲ್ಲಿ ಸಹಕಾರಿ. ಫೌಂಡೇಷನ್ 2010ರಲ್ಲಿ ಸ್ಪಿರುಲಿನಾ ಕುರಿತು ಸಂಶೋಧನೆಯಲ್ಲಿ ಪಾಲ್ಗೊಂಡಿತು. 2019ರಿಂದ ಸ್ಪಿರುಲಿನಾ ನ್ಯೂಟ್ರಾ ಚಿಕ್ಕಿ ತಯಾರಿಸುವ ಕುರಿತು ಮೈಸೂರಿನ ಸಿಎಫ್‍ಟಿಆರ್‌ಐ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಆಸಕ್ತ ಸ್ತ್ರೀಶಕ್ತಿ ಸಂಘಗಳಿಗೆ ತರಬೇತಿ ಸಹ ನೀಡಲು ಸಿದ್ಧವಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.