ತುಮಕೂರು: ಈ ವಾರ ತರಕಾರಿ ಬೆಲೆ ಅಲ್ಪ ಅಗ್ಗವಾಗಿದ್ದು, ಬೆಳ್ಳುಳ್ಳಿ ಮತ್ತಷ್ಟು ಇಳಿಕೆಯಾಗಿದೆ. ಸೊಪ್ಪು ಕೊಂಚ ಚೇತರಿಸಿದ್ದರೆ, ಹಣ್ಣು ಮತ್ತೆ ದುಬಾರಿಯಾಗಿದೆ. ಸಕ್ಕರೆ ಏರಿಕೆಯತ್ತ ಮುಖ ಮಾಡಿದ್ದರೆ, ಕೋಳಿ ಮಾಂಸ ಅಗ್ಗವಾಗಿದೆ.
ಹಿಂದಿನ ವಾರ ಏರಿಕೆಯಾಗಿದ್ದ ತರಕಾರಿ ಮತ್ತೆ ಇಳಿಕೆಯತ್ತ ಸಾಗಿದೆ. ಕ್ಯಾರೇಟ್, ಮೂಲಂಗಿ, ಎಲೆಕೋಸು, ನುಗ್ಗೆಕಾಯಿ, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ, ಈರುಳ್ಳಿ ಅಗ್ಗವಾಗಿದೆ. ಬೀನ್ಸ್, ಗಡ್ಡೆಕೋಸು ಅಲ್ಪ ಏರಿಕೆಯಾಗಿದೆ. ಟೊಮೆಟೊ ಮತ್ತೆ ಇಳಿಕೆ ದಾಖಲಿಸಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವ ಸೌತೆಕಾಯಿ, ನಿಂಬೆಹಣ್ಣು ದುಬಾರಿಯಾಗಿದೆ.
ಕಳೆದ ಎರಡು ವಾರದಿಂದ ಕಡಿಮೆ ಆಗುತ್ತಿರುವ ಬೆಳ್ಳುಳ್ಳಿ ಈಗ ಮತ್ತಷ್ಟು ಇಳಿಕೆಯಾಗಿದ್ದು, ಕೆ.ಜಿ ₹180–200ಕ್ಕೆ ತಲುಪಿದೆ.
ಚೇತರಿಸಿದ ಸೊಪ್ಪು: ಏರಿಳಿತ ಕಂಡಿರುವ ಸೊಪ್ಪು ಈಗ ಚೇತರಿಸಿಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಸೊಪ್ಪು ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.
ಹಣ್ಣು ದುಬಾರಿ: ಹಣ್ಣುಗಳ ದರ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಬಿಸಿಲಿನ ತಾಪ ಹೆಚ್ಚಿದಂತೆ ಧಾರಣೆ ಏರುತ್ತಲೇ ಸಾಗಿದೆ. ಸೇಬು, ಕಿತ್ತಳೆ, ಏಲಕ್ಕಿ ಬಾಳೆಹಣ್ಣು, ಪೈನಾಪಲ್, ಕರಬೂಜ ಹಣ್ಣು ಮತ್ತಷ್ಟು ದುಬಾರಿಯಾಗಿದೆ. ಪಪ್ಪಾಯ ಕೆ.ಜಿಗೆ ₹10 ಕಡಿಮೆಯಾಗಿದೆ.
ಅಡುಗೆ ಎಣ್ಣೆ ಏರಿಕೆ: ಅಡುಗೆ ಎಣ್ಣೆ ಧಾರಣೆ ಏರಿಕೆಯಾಗುತ್ತಲೇ ಇದ್ದು, ಈ ವಾರವೂ ದುಬಾರಿಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹148–150, ಪಾಮಾಯಿಲ್ ಕೆ.ಜಿ ₹129–130, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಏರಿಕೆಯಾಗಿದೆ.
ಸಕ್ಕರೆ ದುಬಾರಿ: ಕೆಲವು ವಾರಗಳಿಂದ ನಿಧಾನವಾಗಿ ಸಕ್ಕರೆ ದರ ಏರಿಕೆ ದಾಖಲಿಸಿದ್ದು, ಕೆ.ಜಿ ₹43–44ಕ್ಕೆ ಜಿಗಿದಿದೆ. ಈ ಬಾರಿ ಸಕ್ಕರೆ ಉತ್ಪಾದನೆ ಕಡಿಮೆಯಾಗಿದ್ದು, ದುಬಾರಿ ಸ್ಥಿತಿಯಲ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ.
ಬೇಳೆ ಕಾಳು, ಧಾನ್ಯಗಳ ಧಾರಣೆಯೂ ಕೊಂಚ ಇಳಿಕೆಯಾಗಿದೆ. ದುಬಾರಿಯಾಗಿದ್ದ ಬಟಾಣಿ ಒಮ್ಮೆಲೆ ಕೆ.ಜಿಗೆ ₹40 ಇಳಿಕೆಯಾಗಿ ಆರು ತಿಂಗಳ ಹಿಂದಿನ ಸ್ಥಿತಿಗೆ ಬಂದು ನಿಂತಿದೆ.
ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಒಣ ಹಣ್ಣುಗಳಲ್ಲಿ ಬಾದಾಮಿ ತುಸು ತಗ್ಗಿದ್ದು, ದ್ರಾಕ್ಷಿ ಏರಿಕೆಯಾಗಿದೆ.
ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–180, ಹುಣಸೆಹಣ್ಣು ₹120–140, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹700–720, ಜೀರಿಗೆ ಕೆ.ಜಿ ₹260–280, ಚಕ್ಕೆ ಕೆ.ಜಿ ₹260–265, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹3,400–3,500, ಬಾದಾಮಿ ಕೆ.ಜಿ ₹780–800, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹250–260ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಏರಿಕೆ: ಹಕ್ಕಿ ಜ್ವರದ ಭೀತಿ ಆವರಿಸುತ್ತಿದ್ದಂತೆ ಕೋಳಿ ಮಾಂಸ ಅಗ್ಗವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹90, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್‌ಲೆಸ್ ಕೆ.ಜಿ ₹180, ಮೊಟ್ಟೆಕೋಳಿ (ಫಾರಂ) ಕೆ.ಜಿ ₹100ಕ್ಕೆ ಇಳಿಕೆಯಾಗಿದೆ.
ಮೀನು ಹೆಚ್ಚಳ: ಕೋಳಿ ಮಾಂಸ ಸೇವನೆ ಕಡಿಮೆಯಾಗಿದ್ದು, ಮೀನು ಬಳಕೆ ಹೆಚ್ಚಾಗಿರುವುದರಿಂದ ಬೆಲೆಯೂ ಏರಿಕೆಯಾಗಿದೆ. ಬಂಗುಡೆ ಕೆ.ಜಿ ₹270, ಬೂತಾಯಿ ಕೆ.ಜಿ ₹370, ಬೊಳಿಂಜರ್ ಕೆ.ಜಿ ₹210, ಅಂಜಲ್ ಕೆ.ಜಿ ₹1,000, ಕಪ್ಪುಮಾಂಜಿ ಕೆ.ಜಿ ₹720, ಇಂಡಿಯನ್ ಸಾಲ್ಮನ್ ಕೆ.ಜಿ ₹1,130, ಸೀಗಡಿ ಕೆ.ಜಿ ₹510–730, ಏಡಿ ಕೆ.ಜಿ ₹480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ಹಣ್ಣು (ಬೆಲೆ ಕೆ.ಜಿ ₹)
ಸೇಬು; 200–300
ದಾಳಿಂಬೆ; 250
ಮೂಸಂಬಿ; 80
ಕಿತ್ತಳೆ; 90
ಸಪೋಟ; 100
ಏಲಕ್ಕಿ ಬಾಳೆ; 85
ಪಚ್ಚಬಾಳೆ; 45
ಸೀಬೆ; 120
ಪೈನಾಪಲ್; 100
ಪಪ್ಪಾಯ; 30
ಕರಬೂಜ; 60
ಕಲ್ಲಂಗಡಿ; 25
ದ್ರಾಕ್ಷಿ; 80
ದ್ರಾಕ್ಷಿ(ಕಪ್ಪು); 250
ಡ್ರ್ಯಾಗನ್ ಫ್ರೂಟ್; 190
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ; 110–125
ಕಡಲೆ ಬೇಳೆ; 80–85
ಉದ್ದಿನ ಬೇಳೆ; 125–130
ಹೆಸರು ಬೇಳೆ; 110–115
ಕಡಲೆಕಾಳು; 70–75
ಹೆಸರು ಕಾಳು; 110–115
ಅಲಸಂದೆ; 90–100
ಅವರೆಕಾಳು; 110–120
ಹುರುಳಿಕಾಳು; 60–65
ಹುರಿಗಡಲೆ; 95–100
ಬಟಾಣಿ; 100–110
ಕಡಲೆ ಬೀಜ; 115–120
ಗೋಧಿ; 42–48
ಸಕ್ಕರೆ; 43–44
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್; 30–35
ಕ್ಯಾರೇಟ್; 20–25
ಬೀಟ್ರೂಟ್; 15–20
ಈರುಳ್ಳಿ; 30–35
ಬೆಳ್ಳುಳ್ಳಿ; 180–200
ಟೊಮೆಟೊ; 10–15
ಆಲೂಗಡ್ಡೆ; 30–35
ಗಡ್ಡೆಕೋಸು; 20–25
ಮೂಲಂಗಿ; 15–20
ಬೆಂಡೆಕಾಯಿ; 25–30
ಬದನೆಕಾಯಿ; 15–20
ಎಲೆಕೋಸು; 10–15
ಹೂಕೋಸು(1ಕ್ಕೆ); 30
ತೊಂಡೆಕಾಯಿ; 30–40
ಹಾಗಲಕಾಯಿ; 30–40
ನುಗ್ಗೆಕಾಯಿ; 70–80
ಮೆಣಸಿನಕಾಯಿ; 40–50
ಕ್ಯಾಪ್ಸಿಕಂ; 30–40
ಶುಂಠಿ; 40–80
ಸೌತೆಕಾಯಿ 1ಕ್ಕೆ; 8–10
ನಿಂಬೆಹಣ್ಣು 1ಕ್ಕೆ; 4–5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.