ADVERTISEMENT

ಮಳೆ ಕೊರತೆಯ ನಡುವೆ ಹುಣಸೆ ಹೂವಿನ ಶೃಂಗಾರ

​ಪ್ರಜಾವಾಣಿ ವಾರ್ತೆ
Published 21 ಮೇ 2019, 13:27 IST
Last Updated 21 ಮೇ 2019, 13:27 IST
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಗೆರೆಯ ಲೋಕೇಶ್ ಅವರ ಹುಣಸೆ ಮರ ಹೂವು ಬಿಟ್ಟು ನಳನಳಿಸುತ್ತಿದೆ
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಗೆರೆಯ ಲೋಕೇಶ್ ಅವರ ಹುಣಸೆ ಮರ ಹೂವು ಬಿಟ್ಟು ನಳನಳಿಸುತ್ತಿದೆ   

ತೋವಿನಕೆರೆ: ಹುಣಸೆ ಹಣ್ಣುಗಳನ್ನು ಬಡಿದ ನಂತರ ಕೆಲವು ದಿನ ಒಣಗಿದಂತೆ ಕಾಣುತ್ತಿದ್ದ ಮರಗಳು ಚಿಗುರಿ ಎಲೆಗಿಂತ ಹೂವುಗಳೇ ಹೆಚ್ಚು ಕಾಣುತ್ತಿವೆ.

ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಗೆರೆಯ ಲೋಕೇಶ್ ಅವರ ಹುಣಸೆ ಮರದಲ್ಲಿ ದಟ್ಟವಾಗಿ ಬಿಟ್ಟಿರುವ ಹೂವು ಗಮನ ಸೆಳೆದಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ವಾರ್ಷಿಕ ವಾಡಿಕೆ ಮಳೆ 637 ಮಿ.ಮೀ. ಆದರೆ, 2018ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೂ ಅಗಿರುವ ಮಳೆ 381 ಮೀ.ಮಿ. ಆದರೆ, ಈ ವರ್ಷ ಹೂವು ಹುಣಸೆ ಮರದ ತುಂಬಾ ಸಮೃದ್ಧವಾದ ಹೂವಿನ ಅಲಂಕಾರವನ್ನು ನೋಡಬಹುದು.

ADVERTISEMENT

‘ಮರದಲ್ಲಿ ಬಿಟ್ಟಿರುವ ಹೂವಿನಲ್ಲಿ ಶೇ 10ರಷ್ಟು ಕಾಯಿ ಆದರೆ ಸಾಕು ಮರದ ಕೊಂಬೆಗಳು ಮುರಿಯುತ್ತವೆ. ಗಾಳಿ, ಮಳೆ, ಬಿಸಿಲಿನ ಶಾಖಕ್ಕೆ ಮಿಕ್ಕ ಹೂವುಗಳು ನೆಲಕ್ಕೆ ಬಿದ್ದು ಹಾಳಗುತ್ತವೆ’ ಎನ್ನುತ್ತಾರೆ ಬೆಳೆಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.