ADVERTISEMENT

ಹೆತ್ತವರ ಮರೆತ ಮಕ್ಕಳು: ವಿಷಾದ

ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಜಯಚಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:16 IST
Last Updated 31 ಡಿಸೆಂಬರ್ 2025, 4:16 IST
<div class="paragraphs"><p>ತುಮಕೂರಿನಲ್ಲಿ ಮಂಗಳವಾರ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ, ವೂಡೇ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ನಡೆಯಿತು. ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ನಿವೃತ್ತ ಪ್ರಾಧ್ಯಾಪಕ ಕೃಷ್ಣೇಗೌಡ,&nbsp;ತ್ಯಾಮಗೊಂಡ್ಲು ಮಠದ ಶೇಷಾಚಲ ಅವಧೂತ ಸ್ವಾಮೀಜಿ ಸೇರಿದಂತೆ&nbsp; ಇತರರು ಪಾಲ್ಗೊಂಡಿದ್ದರು</p></div>

ತುಮಕೂರಿನಲ್ಲಿ ಮಂಗಳವಾರ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ, ವೂಡೇ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ನಡೆಯಿತು. ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ನಿವೃತ್ತ ಪ್ರಾಧ್ಯಾಪಕ ಕೃಷ್ಣೇಗೌಡ, ತ್ಯಾಮಗೊಂಡ್ಲು ಮಠದ ಶೇಷಾಚಲ ಅವಧೂತ ಸ್ವಾಮೀಜಿ ಸೇರಿದಂತೆ  ಇತರರು ಪಾಲ್ಗೊಂಡಿದ್ದರು

   

ತುಮಕೂರು: ಮಕ್ಕಳು ವಿದ್ಯಾಭ್ಯಾಸದ ನಂತರ ವಿದೇಶಗಳಲ್ಲಿ ನೆಲೆಸಿ, ಹೆತ್ತವರನ್ನೇ ಮರೆಯುವ ಅಮಾನವೀಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ನವದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ವಿಷಾದಿಸಿದರು.

ನಗರದಲ್ಲಿ ಮಂಗಳವಾರ‌ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ, ವೂಡೇ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಎಲ್ಲವನ್ನು ತ್ಯಾಗ ಮಾಡುತ್ತಾರೆ. ಮಕ್ಕಳು ಬದುಕು ರೂಪಿಸಿಕೊಂಡ ನಂತರ ಹೆತ್ತವರ ತ್ಯಾಗ ಮರೆಯಬಾರದು. ಕೊನೆಗಾಲದಲ್ಲಿ ನೆಮ್ಮದಿಯಿಂದ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದರು.

ನಿವೃತ್ತ ಪ್ರಾಧ್ಯಾಪಕ ಕೃಷ್ಣೇಗೌಡ, ‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎನ್ನುವುದು ಸುಳ್ಳು, ಕೆಲಸ ಇದ್ದೇ ಇದೆ. ಕೆಲಸವಿಲ್ಲ ಎನ್ನುವುದು ಮೈಗಳ್ಳರು ಹೇಳುವ ಮಾತು. ಬುದ್ಧಿ ಬಳಸಿ, ಇಲ್ಲವೆ ದೇಹ ದಂಡಿಸಿ ಕೆಲಸ ಮಾಡಬೇಕು. ಎರಡೂ ಮಾಡದವರು ಬದುಕಿದ್ದೂ ಆತ್ಮಹತ್ಯೆ ಮಾಡಿಕೊಂಡಂತೆ’ ಎಂದು ಹೇಳಿದರು.

ರಾಷ್ಟ್ರಕ್ಕೆ ಅಭಿವೃದ್ಧಿಯ ರೋಗ ಅಂಟಿಕೊಂಡಿದೆ. ಅಭಿವೃದ್ಧಿ ಎಂದರೆ ರಸ್ತೆ ವಿಸ್ತರಣೆ, ಬೃಹತ್‌ ಕಟ್ಟಡಗಳ ನಿರ್ಮಾಣವಲ್ಲ. ಮೂಲ ಸೌಕರ್ಯಗಳ ಜತೆಗೆ ಸಮಾಜದಲ್ಲಿ ಪ್ರಬುದ್ಧರಾಗಬೇಕು. ಜನರಿಗೆ ದುಡಿಯುವುದು ಕಲಿಸಬೇಕು. ಜಾಗತಿಕ ಮಟ್ಟದ ಸ್ಪರ್ಧೆಗೆ ಕೇವಲ ಬುದ್ಧಿವಂತರಾದರೆ ಸಾಲುವುದಿಲ್ಲ, ಮೇಧಾವಿಗಳಾಗಬೇಕು ಎಂದು ಸಲಹೆ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ‘ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ ಬಗ್ಗೆ ಮಾತ್ರ ಯೋಚಿಸಬಾರದು. ಇತರೆ ಕೋರ್ಸ್‌ಗಳ ಕಡೆಗೆ ಗಮನ ಹರಿಸಬೇಕು’ ಎಂದರು.

ತ್ಯಾಮಗೊಂಡ್ಲು ಮಠದ ಶೇಷಾಚಲ ಅವಧೂತ ಸ್ವಾಮೀಜಿ, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ವಿಜಯಲಕ್ಷ್ಮಿ, ವೂಡೇ ಪ್ರತಿಷ್ಠಾನದ ಗೌರವಾಧ್ಯಕ್ಷ ಡಬ್ಲ್ಯೂ.ಪಿ.ಶಿವಕುಮಾರ್‌, ಡಾ.ಕೆ.ನಾಗಣ್ಣ, ಕುಂಚಿಟಿಗ ಒಕ್ಕಲಿಗ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಶ್ರೀಧರ್, ಪದಾಧಿಕಾರಿಗಳಾದ ಕೆ.ಅಶೋಕ್‌ ಕುಮಾರ್, ಎಸ್.ಸತೀಶ್, ಸಿ.ಬಸವರಾಜು, ಬಿ.ಪ್ರಕಾಶ್, ಮುಖಂಡರಾದ ದೊಡ್ಡಲಿಂಗಪ್ಪ, ಎಲ್.ಲಿಂಗಣ್ಣ, ಸುನಂದಾ ಪಿ.ಕುಮಾರ್, ಎಲ್.ದೇವರಾಜು, ಎಸ್.ಉದಯಕುಮಾರ್, ಎಂ.ವಿ.ಹನುಮಂತಪ್ಪ, ಜಗದೀಶ್‌ ಗೌಡ, ಎಸ್.ಕೆ.ನಾಗರಾಜು, ಎಚ್.ಎಸ್.ಪ್ರಕಾಶ್, ಮುಕುಂದಪ್ಪ, ಡಿ.ಶಶಿಕುಮಾರ್, ಈರನಾಗಪ್ಪ, ಡಿ.ರಾಜಶೇಖರ್, ಎ.ಎಲ್.ಜಗನ್ನಾಥ್‌, ಬಿ.ಆರ್.ಮಂಜುನಾಥ್‌, ಬಿ.ಆರ್.ಸಿದ್ಧಲಿಂಗಪ್ಪ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.