ADVERTISEMENT

ಐದು ಮರಿಗಳಿಗೆ ಜನ್ಮ ನೀಡಿದ ಮೇಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 7:52 IST
Last Updated 4 ಫೆಬ್ರುವರಿ 2021, 7:52 IST
   

ಮಧುಗುರಿ (ತುಮಕೂರು ಜಿ): ತಾಲ್ಲೂಕಿನ ಗೊಂದಿಹಳ್ಳಿ ಗ್ರಾಮದ ರಮೇಶ್ ಬಾಬು ಅವರ ಮೇಕೆ ಗುರುವಾರ ಐದು ಮರಿಗಳಿಗೆ ಜನ್ಮ ನೀಡಿದೆ. ಈ ಮೇಕೆಮತ್ತು ಮರಿಗಳನ್ನು ನೋಡಲು ಹಳ್ಳಿಗಳಿಂದ ಜನರು ಬರುತ್ತಿದ್ದಾರೆ.

ಎರಡು ಗಂಡು ಮತ್ತು ಮೂರು ಹೆಣ್ಣು ಮರಿಗಳು ಇವಾಗಿವೆ.ರಮೇಶ್ಅವರು ಜೀವನಕ್ಕಾಗಿ ಮೇಕೆಗಳನ್ನು ಸಾಕಿದ್ದಾರೆ.

ಪ್ರತಿ ಸಾರಿ ಈ ಮೇಕೆ ಮೂರು ಮತ್ತು ನಾಲ್ಕು ಮರಿ ಹಾಕುತ್ತಿತ್ತು. ಆದರೆ ಈ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.