ADVERTISEMENT

ತಿಪಟೂರು: ಬೀದಿಯಲ್ಲಿ ಕಾಯುತ್ತಿರುವ ಬೆಳಗಾರರು

ಒಂದು ಕಡೆ ಮಾತ್ರ ಕೊಬ್ಬರಿ ಖರೀದಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 7:11 IST
Last Updated 18 ಏಪ್ರಿಲ್ 2023, 7:11 IST
ಕೊಬ್ಬರಿ ತುಂಬಿದ ಟ್ರ್ಯಾಕ್ಟರ್‌ಗಳು ಸರದಿ ಸಾಲಿನಲ್ಲಿ ನಿಂತಿರುವುದು
ಕೊಬ್ಬರಿ ತುಂಬಿದ ಟ್ರ್ಯಾಕ್ಟರ್‌ಗಳು ಸರದಿ ಸಾಲಿನಲ್ಲಿ ನಿಂತಿರುವುದು   

ತಿಪಟೂರು: ತಿಪಟೂರಿನಲ್ಲಿ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಿದ್ದು ಮೂರು ಖರೀದಿ ಕೇಂದ್ರವನ್ನು ತೆರೆಯಲು ಆದೇಶ ನೀಡಿದರೂ ಕೇವಲ ಒಂದೇ ಕಡೆಯಲ್ಲಿ ಖರೀದಿ ಮಾಡುತ್ತಿದ್ದು ರೈತರು ಕೊಬ್ಬರಿ ತುಂಬಿದ ಟ್ರ್ಯಾಕ್ಟರ್‌ಗಳನ್ನು ಬೀದಿಯಲ್ಲಿ ನಿಲ್ಲಿಸಿಕೊಂಡು ರಾತ್ರಿ-ಹಹಲು ಕಾಯವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲ ದಿನಗಳಿಂದಲೂ ರೈತರು ಕೊಬ್ಬರಿ ಖರೀದಿಯ ಬಳಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ರೈತ ಸಂಘದ ಗಮನಕ್ಕೆ ತರುತ್ತಿದ್ದು ಸೋಮವಾರ ರೈತ ಸಂಘವು ತಿಪಟೂರಿನ ನಫೆಡ್ ಕೊಬ್ಬರಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಳೆದ ನಾಲ್ಕು ದಿನಗಳಿಂದ ಸುಮಾರು 150ಕ್ಕೂ ಹೆಚ್ಚು ರೈತರ ಕೊಬ್ಬರಿ ತುಂಬಿದ ಟ್ರ್ಯಾಕ್ಟರ್‌ಗಳು ಸರದಿ ಸಾಲಿನಲ್ಲಿ ನಿಂತಿದ್ದು ಕಂಡು ಬಂದಿದೆ.

ಈಗಾಗಲೇ ರೈತರ 150 ಟ್ರ್ಯಾಕ್ಟರ್‌ಗಳ ಕೊಬ್ಬರಿಯನ್ನು ಸೇರಿಸಿ ₹11.50 ಕೋಟಿಯಷ್ಟು ಮೌಲ್ಯದ ರೈತರ ಬೆಳೆ ಬೀದಿಯಲ್ಲಿ ಇದ್ದು ರಕ್ಷಣೆ ಇಲ್ಲದಂತಾಗಿದೆ.

ADVERTISEMENT

ಪ್ರತಿದಿನ ಕೇಂದ್ರದಲ್ಲಿ ಸರಾಸರಿ 40 ಟ್ರ್ಯಾಕ್ಟರ್‌ಗಳಷ್ಟು ಕೊಬ್ಬರಿಯನ್ನು ಮಾತ್ರವಷ್ಟೇ ಖರೀದಿ ಮಾಡುತ್ತಿದೆ. ಉಳಿದ ಟ್ಯಾಕ್ಟರ್‌ಗಳು ಸಾಲಿನಲ್ಲೇ ಮೂರು ರಾತ್ರಿ ಮತ್ತು ಮೂರು ಹಗಲು ಕಳೆದ ನಂತರವಷ್ಟೇ ಕೊಬ್ಬರಿಯನ್ನು ಖರೀದಿ ಕೇಂದ್ರದಲ್ಲಿ ಕೊಬ್ಬರಿ ಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.