
ಬಂಧನ
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ಬೀರೂರಿನ ಕಬಾಬ್ ವ್ಯಾಪಾರಿ ಶಫಿಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
ಬೀರೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಪುಟ್ಟರಾಜು ಎಂಬುವವರನ್ನು ಶಫಿಉಲ್ಲಾ ತಲೆ ಕತ್ತರಿಸಿ ಕೊಲೆ ಮಾಡಿದ್ದ.
ಪುಟ್ಟರಾಜು ಲೇವಾದೇವಿ ವ್ಯವಹಾರವನ್ನೂ ಮಾಡುತ್ತಿದ್ದು, ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಇತ್ತು.
ಶಫಿಉಲ್ಲಾ ತಾಲ್ಲೂಕಿನ ಹೊನ್ನವಳ್ಳಿ ಬ್ಯಾಂಕ್‌ನಲ್ಲಿ ಒಡವೆಗಳನ್ನು ಅಡವಿಟ್ಟಿದ್ದು, ಅದನ್ನು ಬಿಡಿಸಿಕೊಳ್ಳಲೆಂದು ಇಬ್ಬರೂ ಬೀರೂರಿನಿಂದ ಜೊತೆಯಾಗಿ ಬಂದಿದ್ದರು. ಮಾರ್ಗಮಧ್ಯೆ ಶಫಿಉಲ್ಲಾ ತೋಟದ ಕೆಲಸಕ್ಕೆ ಎಂದು ಪುಟ್ಟರಾಜು ಬಳಿ ಹೇಳಿ ಮಾರಕಾಸ್ತ್ರಗಳನ್ನು ಖರೀದಿಸಿದ್ದ.
ಬೋವಿ ಕಾಲೊನಿ ಸಮೀಪ ಮೂತ್ರ ವಿಸರ್ಜನೆಗಾಗಿ ದ್ವಿಚಕ್ರ ವಾಹನ ನಿಲ್ಲಿಸಿದ್ದ ವೇಳೆ, ಮಾರಕಾಸ್ತ್ರದಿಂದ ಪುಟ್ಟರಾಜು ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.