ಕೊರಟಗೆರೆ: ಕೊರಟಗೆರೆ: ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ರಸಗೊಬ್ಬರ ತುಂಬಿದ್ದ ಲಾರಿ ಬೇಕರಿಗೆ ನುಗ್ಗಿದ್ದರಿಂದ ಮೂವರು ಮೃತಪಟ್ಟಿದ್ದು, ಮೂರು ಜನರು ತೀವ್ರ ಗಾಯಗೊಂಡಿದ್ದಾರೆ.
ಕಾಟೇನಹಳ್ಳಿ ನಿವಾಸಿ ರಂಗಶಾಮಯ್ಯ (65), ಪುರದಳ್ಳಿಯ ಬೈಲಪ್ಪ (65) ಕೋಳಾಲದ ಜಯಣ್ಣ (50)ಮೃತರು. ಕಾಂತರಾಜು, ಸಿದ್ಧಗಂಗಮ್ಮ, ಮೋಹನ್‌ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆರೂ ಜನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು.
ಚಾಲಕನ ನಿಯಂತ್ರಣ ತಪ್ಪಿದ ಲಾರಿ ಬೇಕರಿಗೆ ನುಗ್ಗಿದೆ. ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.