ADVERTISEMENT

ತುಮಕೂರು ದಸರಾ: ‘ಜಾಣ’ ಗೀತೆಗೆ ಹೆಜ್ಜೆ ಹಾಕಿದ ರಮ್ಯಾ, ರವಿಚಂದ್ರನ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 8:04 IST
Last Updated 1 ಅಕ್ಟೋಬರ್ 2025, 8:04 IST
   

ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ 'ತುಮಕೂರು ದಸರಾ' ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ನಟ ವಿ.ರವಿಚಂದ್ರನ್, ನಟಿ ರಮ್ಯಾ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ರವಿಚಂದ್ರನ್ ನಟನೆಯ ‘ಜಾಣ’ ಚಿತ್ರದ 'ಪ್ರೇಮಲೋಕದ ಪಾರಿಜಾತವೇ' ಗೀತೆಗೆ ರವಿಚಂದ್ರನ್, ರಮ್ಯಾ ಹೆಜ್ಜೆ ಹಾಕಿ ನೆರೆದವರನ್ನು ರಂಜಿಸಿದರು. ಪ್ರೇಕ್ಷಕರು ಸಿಳ್ಳೆ, ಚೆಪ್ಪಾಳೆಯ ಸದ್ದು ಮೊ ಳಗಿಸಿದರು.

ಇದಕ್ಕೂ ಮುನ್ನ ರವಿಚಂದ್ರನ್ ತಮ್ಮ 'ಮಲ್ಲ' ಚಿತ್ರದ 'ಕರುನಾಡೇ ಕೈ ಚಾಚಿದೆ ನೋಡೇ', 'ಕನಸುಗಾರನಾಗಿ ಕರುನಾಡಲ್ಲೇ ಮತ್ತೆ ಹುಟ್ಟಬೇಕು ನಾನು' ಎಂಬ ಗೀತೆಗೆ ನೃತ್ಯ ಪ್ರದರ್ಶಿಸಿದರು.

ADVERTISEMENT

ರವಿಚಂದ್ರನ್ ಮಾತನಾಡಿ, 'ಪ್ರೇಮಲೋಕ-2 ಚಿತ್ರ ಬಂದೇ ಬರುತ್ತದೆ. ಈಗಾಗಲೇ 24 ಹಾಡು ಸಿದ್ಧವಾಗಿದೆ. ಚಿತ್ರೀಕರಣಕ್ಕೆ ಸೂಕ್ತ ಜಾಗ ಸಿಗುತ್ತಿಲ್ಲ. ಚಿತ್ರೀಕರಣಕ್ಕೆ ಒಂದು ಊರು ಕಟ್ಟಬೇಕಾಗುತ್ತದೆ. ತಯಾರಿ ನಡೆಯುತ್ತಿದೆ' ಎಂದು ಹೇಳಿದರು.

ಯಾವತ್ತಿಗೂ ಸಿನಿಮಾದ ಮೇಲಿನ ಹಠ, ಛಲ ಕಡಿಮೆಯಾಗಲ್ಲ. ಕುಟುಂಬಕ್ಕೆ ಬೇಕಾದರೆ ಮೋಸ ಮಾಡಿರಬಹುದು. ಆದರೆ ಸಿನಿಮಾಗೆ ಎಂದಿಗೂ ಮೋಸ ಮಾಡಿಲ್ಲ, ಮಾಡಲ್ಲ. ಕಾರ್ಯಕ್ರಮಕ್ಕೆ ತುಂಬಾ ರಾಯಲ್ ಆಗಿ ಸ್ವಾಗತಿಸಿದ್ದಾರೆ. ರಣಧೀರನಾಗಿಯೇ ವೇದಿಕೆಗೆ ಬಂದಿದ್ದೇನೆ ಎಂದರು.

ಮೂಡುಬಿದರೆ ಆಳ್ವಾಸ್ ಸಾಂಸ್ಕೃತಿಕ ತಂಡದಿಂದ 'ಭಾರತ ವೈಭವ' ನೃತ್ಯ ರೂಪಕ ಪ್ರದರ್ಶಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಎಚ್.ವಿ.ವೆಂಕಟೇಶ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.