ತುಮಕೂರು: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ವಿದ್ಯುತ್ ಕಡಿತದಿಂದ ಲಿಫ್ಟ್ ಮಧ್ಯದಲ್ಲೇ ನಿಂತಿದ್ದು, ಸುಮಾರು ಅರ್ಧ ಗಂಟೆ ಕಾಲ ಮೂವರು ಲಿಫ್ಟ್‌ನಲ್ಲಿ ಸಿಲುಕಿಕೊಂಡು ಪರದಾಡಿದರು. ಕೊನೆಗೂ ಜೀವ ಭಯದಿಂದ ಹೊರ ಬಂದು ನಿಟ್ಟುಸಿರು ಬಿಟ್ಟರು.
ಮಧ್ಯಾಹ್ನ 3.30ರ ಸಮಯದಲ್ಲಿ ವಿದ್ಯುತ್ ಕಡಿತಗೊಂಡಿದೆ. ಬೆಸ್ಕಾಂ ಸಿಬ್ಬಂದಿ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿಗಳು ಊಟಕ್ಕೆ ತೆರಳಿದ್ದರಿಂದ ಲಿಫ್ಟ್ ಕಡೆಗೆ ಯಾರೂ ಗಮನ ಹರಿಸಿಲ್ಲ. ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಇಬ್ಬರು ಸಿಬ್ಬಂದಿ, ಒಬ್ಬರು ಸಾರ್ವಜನಿಕರು ಲಿಫ್ಟ್‌ನಲ್ಲಿ ಸಿಲುಕಿ ಬಳಲಿದ್ದಾರೆ. ಹೊರಗಡೆ ಇದ್ದವರಿಗೆ ಕರೆ ಮಾಡಿ ವಿಚಾರಿಸಿದಾಗ ವಿದ್ಯುತ್ ಕಡಿತ ಆಗಿರುವುದು ಗೊತ್ತಾಗಿದೆ.
‘ನಿತ್ಯ ನೂರಾರು ಜನ ಭೇಟಿ ನೀಡುವ ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್‌ಗೆ ಯುಪಿಎಸ್ ಅಳವಡಿಸಿಲ್ಲ. ವಿದ್ಯುತ್ ಕಡಿತವಾದ ಪ್ರತಿ ಸಾರಿ ಲಿಫ್ಟ್ ಕೆಲಸ ಮಾಡುವುದಿಲ್ಲ. ಅರ್ಧಕ್ಕೆ ನಿಂತರೆ ಮತ್ತೆ ವಿದ್ಯುತ್ ಬರುವ ತನಕ ಕಾಯಬೇಕು. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಆದರೆ, ಅವು ಯಾರ ಗಮನಕ್ಕೂ ಬಂದಿಲ್ಲ’ ಎಂದು ಸಾರ್ವಜನಿಕರೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.