ADVERTISEMENT

ತುಮಕೂರು | ಅಥ್ಲೆಟಿಕ್ಸ್‌: ಜಿಲ್ಲೆಯ ಕ್ರೀಡಾಪಟುಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:59 IST
Last Updated 21 ಜನವರಿ 2026, 4:59 IST
ತುಮಕೂರಿನಲ್ಲಿ ಮಂಗಳವಾರ ನಡೆದ ಕೊಕ್ಕೊ ಪಂದ್ಯದಲ್ಲಿ ಡೈವ್‌ ಹೊಡೆದು ಅಂಕ ಪಡೆದ ಆಟಗಾರ
ಚಿತ್ರ: ಚಂದನ್‌
ತುಮಕೂರಿನಲ್ಲಿ ಮಂಗಳವಾರ ನಡೆದ ಕೊಕ್ಕೊ ಪಂದ್ಯದಲ್ಲಿ ಡೈವ್‌ ಹೊಡೆದು ಅಂಕ ಪಡೆದ ಆಟಗಾರ ಚಿತ್ರ: ಚಂದನ್‌   

ತುಮಕೂರು: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಪುರುಷರ ವಿಭಾಗದ 10 ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಜಿಲ್ಲೆಯ ಮೂವರು ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಟಿ.ಸಿ.ಸಂದೀಪ್‌ ಚಿನ್ನ, ಎಲ್‌.ರಘುವೀರ್‌ ಬೆಳ್ಳಿ, ಎಚ್‌.ಎ.ದರ್ಶನ್‌ ಕಂಚಿನ ಪದಕಕ್ಕೆ ಕೊರಳಿಡ್ಡಿದರು.

1,500 ಮೀಟರ್ ಓಟ– ಜೆ.ಆರ್‌.ಕಲ್ಯಾಣ್‌ (ಬೆಂಗಳೂರು ನಗರ)–1, ವೈಭವ್‌ ಮಾರುತಿ ಪಾಟೀಲ್‌ (ಬೆಳಗಾವಿ)–2, ಎಸ್‌.ಕಮಲಕಣ್ಣನ್‌ (ಬೆಂಗಳೂರು ನಗರ)–3. 400 ಮೀಟರ್‌– ಓಮ್‌ ಸುನಿಲ್‌ ಚೌವಾಣ್‌ (ಬೆಳಗಾವಿ)–1, ವೀರೇಶ್‌ ಬಿ.ಕಾಂಬ್ಳೆ (ಬೆಳಗಾವಿ)–2, ಸ್ವಯಂ ದಿನೇಶ್‌ ಜುವೆಕರ್‌ (ಬೆಳಗಾವಿ)–3.

ADVERTISEMENT

ವೇಟ್‌ ಲಿಫ್ಟಿಂಗ್‌: ಮಹಿಳೆಯರ ವಿಭಾಗ– 69 ಕೆ.ಜಿ ಸೀಮಾ ಜಯಕಾಂತ್‌ (ದಕ್ಷಿಣ ಕನ್ನಡ)–1, ಅಮೂಲ್ಯ ಆರ್.ರಾವ್ (ಬೆಂಗಳೂರು ನಗರ)–2, ಮಲ್ಲಮ್ಮ ಕಣಬೂರ್‌ (ದಕ್ಷಿಣ ಕನ್ನಡ)–3. 77 ಕೆ.ಜಿ ವಿಭಾಗ– ಎಸ್‌.ಮಾನಸ (ದಕ್ಷಿಣ ಕನ್ನಡ)–, ವಿತಶ್ರೀ ವಿ.ಗೌಡ (ದಕ್ಷಿಣ ಕನ್ನಡ)–2, ಟಿ.ಜೆ.ಸ್ಫೂರ್ತಿ (ದಕ್ಷಿಣ ಕನ್ನಡ)–3. 86 ಕೆ.ಜಿ- ಭುವನೇಶ್ವರಿ (ಉಡುಪಿ)-1, ರಶ್ಮಿತಾ‌ ಆಚಾರ್ಯ (ದಕ್ಷಿಣ ಕನ್ನಡ)-2, ತೇಜಸ್ಬಿನಿ ಪೂಜಾರಿ (ದಕ್ಷಿಣ ಕನ್ನಡ)-3.

ಪುರುಷರ ವಿಭಾಗ: 94 ಕೆ.ಜಿ– ಎಂ.ಕೆ.ಸಂತೋಷ್‌ (ದಕ್ಷಿಣ ಕನ್ನಡ)–1, ಎ.ತಿಲಕ್‌(ಬೆಂಗಳೂರು ನಗರ)–2, ಶಮಂತ್‌ ಶೆಟ್ಟಿ (ದಕ್ಷಿಣ ಕನ್ನಡ)–3. 88 ಕೆ.ಜಿ– ಎಂ.ಸಚಿನ್‌ಕುಮಾರ್‌ (ಉಡುಪಿ)–1, ಜೇಮ್ಸ್‌ ಕ್ಯಾರಿ (ದಕ್ಷಿಣ ಕನ್ನಡ)–2, ಜೀವನ್‌ (ಮೈಸೂರು)–3.

ಟೇಬಲ್‌ ಟೆನಿಸ್‌ ಡಬಲ್ಸ್‌ ವಿಭಾಗದಲ್ಲಿ ಬೆಂಗಳೂರಿನ ರೋಹಿತ್‌ ಶಂಕರ್‌– ರಾಮ್‌ಕುಮಾರ್‌ ಜೋಡಿ 3-0 ಸೆಟ್‌ಗಳಿಂದ ಮಂಗಳೂರಿನ ಸನ್ಮಾನ್‌– ವಿನಯ್‌ಕುಮಾರ್‌ ಜೋಡಿಯನ್ನು ಸೋಲಿಸಿತು. ಮಹಿಳೆಯರ ಡಬಲ್ಸ್‌ನಲ್ಲಿ ಮಂಗಳೂರಿನ ಪಿ.ಪ್ರೇಕ್ಷಾ– ನಹಲಾ ಜೋಡಿ 3-2 ಸೆಟ್‌ನಿಂದ ಬೆಂಗಳೂರು ನಗರದ ಸಹನಾ– ಕರ್ಣ ಜೋಡಿ ವಿರುದ್ಧ ಜಯಗಳಿಸಿತು.

ವಾಲಿಬಾಲ್‌: ಮಹಿಳೆಯರ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪೋಸ್ಟಲ್‌ ತಂಡ ಸ್ವರ್ಣ ಪದಕ ಪಡೆಯಿತು. 25-16, 29-27, 25-16 ಅಂತರದಿಂದ ಜೆಎಸ್‌ಎಸ್‌ ಧಾರವಾಡ ತಂಡವನ್ನು ಮಣಿಸಿತು. ಪುರುಷರ ವಿಭಾಗದಲ್ಲಿ ರಾಜ್ಯ ಪೊಲೀಸ್‌ ತಂಡ 25– 18, 25– 18, 25–19 ಸೆಟ್‌ಗಳಿಂದ ಎಸ್‌ಡಿಎಂ ಉಜಿರೆ ತಂಡವನ್ನು ಸೋಲಿಸಿತು.

ಗಮನ ಸೆಳೆದ ಮಹಿಳೆಯರ ಕೊಕ್ಕೊ ಪಂದ್ಯ
ತ್ರಿವಿಧ ಜಿಗಿತದ ಒಂದು ಭಂಗಿ
ಬಾಕ್ಸಿಂಗ್‌ ಪಂದ್ಯದ ಝಲಕ್‌
ಎಸ್‌.ಡಿ.ಶಾಹಿನ್‌

ಬಾಕ್ಸಿಂಗ್‌: ಕಾರವಾರ ಆಟಗಾರರ ಕಮಾಲ್‌ ಪುರುಷರ ವಿಭಾಗ: 47– 50 ಕೆ.ಜಿ– ದಿನೇಶ್‌ ಸಿದ್ದಿ (ಕಾರವಾರ)–1 ವಿಶಾಲ್‌ ಆರ್‌.ನಿಂಬಾಳ್ಕರ್‌ (ಬೆಳಗಾವಿ)–2 ಮರಿಯಾ ಜೋಲ್‌ (ಬೆಂಗಳೂರು)–3. 50–55 ಕೆ.ಜಿ– ಮೌರೇಶ್‌ ಸಿದ್ದಿ (ಕಾರವಾರ)–1 ಪ್ರತಮೇಶ್‌ ಗಾರ್ಡೆ (ಬೆಳಗಾವಿ)–2 ಎಸ್‌.ಮಯೂರ್‌ (ಬೆಂಗಳೂರು)3. 55– 60 ಕೆ.ಜಿ– ದಿನೇಶ್‌ ಶಂಕರ್‌ (ಕಾರವಾರ)–1 ದರುಲ್‌ ಜೋ (ಬೆಂಗಳೂರು)–2 ಸುಜನ್‌ (ಶಿವಮೊಗ್ಗ)–3. 60– 65 ಕೆ.ಜಿ– ಬಸವರಾಜ್‌ ಕಟ್ಟಿ (ಬೆಂಗಳೂರು)–1 ದರ್ಶನ್‌ (ಕಾರವಾರ)–2 ಎನ್‌.ಲಿಖಿತ್‌ (ಮೈಸೂರು)–3. ಮಹಿಳೆಯರ ವಿಭಾಗ: 45– 48 ಕೆ.ಜಿ– ಸ್ಫೂರ್ತಿ (ಮೈಸೂರು)–1 ದಿವ್ಯಾ (ಬೆಂಗಳೂರು)–2 ಫರೀನ್‌ (ತುಮಕೂರು)–3. 48–  51 ಕೆ.ಜಿ– ಆರ್ಚನಾ (ಉಡುಪಿ)–1 ಹರ್ಷಿತಾ (ಬೆಂಗಳೂರು)–2 ಧೃತಿ ಉತ್ತಮ್‌ (ಮೈಸೂರು)–3. 51– 54 ಕೆ.ಜಿ– ಯೋಗಶ್ರೀ (ಬೆಂಗಳೂರು)–1 ದುರ್ಗ ಭವಾನಿ (ಮೈಸೂರು)–2 ಮೋನಿಕಾ (ತುಮಕೂರು)–3. 70– 75 ಕೆ.ಜಿ– ಶಾರ್ವಿ ಶೆಟ್ಟಿ (ಉಡುಪಿ)–1 ಶಾಂಬವಿ (ಮೈಸೂರು)–2 75– 80 ಕೆ.ಜಿ– ಲೇಕ್ನಾ (ಬೆಂಗಳೂರು)–1 ಹರ್ಷಿತಾ (ಮೈಸೂರು)–2. 80 ಕೆ.ಜಿ ಮೇಲ್ಪಟ್ಟವರು– ಬಿಂದುಶ್ರೀ (ಮೈಸೂರು)–1 ತನುಶ್ರೀ (ಬೆಂಗಳೂರು)–2.

ಕೊಕ್ಕೊ: ಆತಿಥೇಯ ತಂಡಗಳಿಗೆ ನಿರಾಸೆ ರಾಜ್ಯ ಒಲಿಂಪಿಕ್ಸ್‌ನಲ್ಲಿ ಮಂಗಳವಾರದಿಂದ ಆರಂಭವಾದ ಕೊಕ್ಕೊ ಪಂದ್ಯಾವಳಿಯಲ್ಲಿ ಆತಿಥೇಯ ತುಮಕೂರು ತಂಡಗಳು ಸೋಲಿನ ಮೂಲಕ ಟೂರ್ನಿ ಆರಂಭಿಸಿದವು. ಪುರುಷರ ವಿಭಾಗದಲ್ಲಿ ಬೆಳಗಾವಿ ವಿರುದ್ಧ 16–15 ಅಂಕಗಳಿಂದ ತುಮಕೂರು ತಂಡ ಸೋಲನುಭಸಿತು. ಒಂದು ಪಾಯಿಂಟ್‌ ಹಿನ್ನಡೆಯಾಯಿತು. ತುಮಕೂರಿನ ಮಹಿಳೆಯರ ತಂಡ ಮೈಸೂರು ತಂಡದ ವಿರುದ್ಧ 12–01 ಅಂಕಗಳಿಂದ ಪರಾಭವಗೊಂಡಿತು.

ಹಮಾಲಿ ಮಗಳಿಗೆ ಚಿನ್ನ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ 10 ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಹಮಾಲಿ ಕಾರ್ಮಿಕರ ಮಗಳು ಎಸ್‌.ಡಿ.ಶಾಹಿನ್‌ ಚಿನ್ನದ ಪದಕ ಗೆದ್ದು ಗಮನ ಸೆಳೆದರು. ಶಾಹಿನ್‌ ತಂದೆ ನಾಲ್ಕು ವರ್ಷದ ಹಿಂದೆ ನಿಧನರಾಗಿದ್ದಾರೆ. ಅಣ್ಣ ನಿಂಬೆ ಹಣ್ಣಿನ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಪ್ರೋತ್ಸಾಹ ಸಹಕಾರದಿಂದ ಶಾಹಿನ್‌ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.