ADVERTISEMENT

ತಿಪಟೂರು ಕೆರೆಗೆ ಹರಿದ ಹೇಮೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 2:02 IST
Last Updated 26 ಮೇ 2020, 2:02 IST
ತಿಪಟೂರು ತಾಲ್ಲೂಕಿನ ಶಿವಪುರ ಚೆಕ್‍ಡ್ಯಾಂನಿಂದ ಹೇಮಾವತಿ ನೀರು ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆಗೆ ಹರಿಯಿತು
ತಿಪಟೂರು ತಾಲ್ಲೂಕಿನ ಶಿವಪುರ ಚೆಕ್‍ಡ್ಯಾಂನಿಂದ ಹೇಮಾವತಿ ನೀರು ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆಗೆ ಹರಿಯಿತು   

ತಿಪಟೂರು: ನಗರದ ಕುಡಿಯುವ ನೀರಿನ ಜೀವನಾಡಿಯಾಗಿರುವ ಈಚನೂರು ಕೆರೆಗೆ ಹೇಮಾವತಿ ನೀರು ಬಂದಿದ್ದು, ಅಲ್ಲಿಂದ ಅಮಾನಿಕೆರೆಗೆ ನೀರು ಬಿಡುಗಡೆ ಮಾಡಲಾಗಿದೆ.

ನಗರದ ಅಮಾನಿಕೆರೆಯನ್ನು ಸಹ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸುತ್ತಿದ್ದು, ಈ ಕೆರೆಯೂ 32 ಎಂಸಿಎಫ್‌ಟಿ ನೀರನ್ನು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. 3 ತಿಂಗಳಿನಿಂದ ನೀರು ಬಿಡದ ಕಾರಣ ಕೆರೆಯ ನೀರು ಖಾಲಿಯಾಗಿ ಕೆಳಮಟ್ಟಕ್ಕೆ ತಲುಪಿತ್ತು.

ಇದರಿಂದ ನಗರದ ಕೆಲ ಕೊಳವೆಬಾವಿಗಳ ಅಂತರ್ಜಲಮಟ್ಟವು ಕುಸಿತಕಂಡಿದ್ದು, ಕೆಲವು ಕೊಳವೆಬಾವಿಗಳು ನಿಲ್ಲುವ ಹಂತಕ್ಕೆ ತಲುಪಿವೆ. ಸದ್ಯ ಹೇಮಾವತಿ ನೀರು ಬಿಟ್ಟಿರುವುದರಿಂದ ನಗರಸಭೆಯ 192 ಕೊಳವೆಬಾವಿಗಳು ಹಾಗೂ ಖಾಸಗಿ ಯವರ ಸಾವಿರಾರು ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.