ಹುಳಿಯಾರು: ಇಲ್ಲಿನ ಹುಳಿಯಾರು-ಕೆಂಕೆರೆ ಬಿಎಂಎಸ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೂರ್ ಫಾತಿಮಾ 2023-24ನೇ ಸಾಲಿನ ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಐಚ್ಛಿಕ ಕನ್ನಡ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಾತಿಮಾ ಕೆಂಕೆರೆ ಗ್ರಾಮದ ಮಜೀದ್ ಸಾಬ್ ಹಾಗೂ ವಹೀದಾ ಬಾನು ಅವರ ಪುತ್ರಿ.
ಫಾತಿಮಾ ಒಟ್ಟು 1,400 ಅಂಕಗಳಿಗೆ 1,345 ಅಂಕಗಳನ್ನು ಪಡೆಯುವ ಮೂಲಕ ಶೇ 96.07 ಅಂಕಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.