ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್)
ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಬಿರುಸು ಪಡೆದುಕೊಂಡಿದ್ದು, ಈವರೆಗೆ 24 ಮಂದಿ ಉಮೇದುವಾರಿಕೆ ದಾಖಲಿಸಿದ್ದಾರೆ.
ಹಿಂದಿನ ಅವಧಿಯಲ್ಲಿ ನಿರ್ದೇಶಕರಾಗಿದ್ದ ಬಹುತೇಕರು ಮತ್ತೆ ಕಣಕ್ಕೆ ಇಳಿದಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತಮ್ಮ ಪತ್ನಿ ಭಾರತಿದೇವಿ ಅವರನ್ನು ಕಣಕ್ಕಿಳಿಸಿದ್ದಾರೆ. ಮಾಜಿ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಅ. 27ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ. 2ರ ವರೆಗೆ ಸಮಯಾವಕಾಶವಿದೆ. ನಾಮಪತ್ರ ಸಲ್ಲಿಸಿದವರ ವಿವರ ಕೆಳಗಿನಂತಿದೆ.
ತುಮಕೂರು ತಾಲ್ಲೂಕು: ಎಚ್.ಎ.ನಂಜೇಗೌಡ, ಎಚ್.ಕೆ.ರೇಣುಕಾಪ್ರಸಾದ್.
ಕೊರಟಗೆರೆ: ಟಿ.ಎನ್.ಅರುಣ್ ಕುಮಾರ್, ಈಶ್ವರಯ್ಯ, ವಿ.ಸಿದ್ದಗಂಗಯ್ಯ.
ಮಧುಗಿರಿ: ಬಿ.ನಾಗೇಶ್‌ಬಾಬು, ಚಂದ್ರಶೇಖರ್, ಎಸ್.ಶ್ರೀನಿವಾಸ್.
ಶಿರಾ: ಎಸ್.ಆರ್.ಗೌಡ, ಸಿ.ಆರ್.ಉಮೇಶ್.
ಚಿಕ್ಕನಾಯಕನಹಳ್ಳಿ: ಎಸ್.ರಾಜಶೇಖರಯ್ಯ, ಬಿ.ಎನ್.ಶಿವಪ್ರಕಾಶ್.
ತಿಪಟೂರು: ಎಂ.ಕೆ.ಪ್ರಕಾಶ್, ಬಿ.ಎಂ.ಶಶಿಧರ, ತ್ರಿಯಂಬಕ.
ತುರುವೇಕೆರೆ: ಸಿ.ವಿ.ಮಹಲಿಂಗಯ್ಯ, ಪಿ.ಟಿ.ಗಂಗಾಧರಯ್ಯ, ಡಿ.ಎಂ.ಸುರೇಶ್.
ಗುಬ್ಬಿ: ಜಿ.ಸಿ.ತೇಜಸ್ವಿನಿ, ಜಿ.ಚಂದ್ರಶೇಖರ್, ಕೆ.ಪಿ.ಭಾರತೀದೇವಿ, ಎಂ.ಎಲ್.ರಾಜೇಶ್.
ಕುಣಿಗಲ್: ಬಿ.ಕೃಷ್ಣಕುಮಾರ್.
ಪಾವಗಡ: ಚನ್ನಮಲ್ಲಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.