ADVERTISEMENT

ತುರುವೇಕೆರೆ | ಮನೆ ಮೇಲೆ ಉರುಳಿದ ತೆಂಗಿನ ಮರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:16 IST
Last Updated 27 ಜುಲೈ 2024, 14:16 IST
ತುರುವೇಕೆರೆ ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ ಮನೆ ಮೇಲೆ ಉರುಳಿರುವು ತೆಂಗಿನ ಮರ
ತುರುವೇಕೆರೆ ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ ಮನೆ ಮೇಲೆ ಉರುಳಿರುವು ತೆಂಗಿನ ಮರ    

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಮಾವಿನಕೆರೆ ಗ್ರಾಮದ ಸಣ್ಣ ನಂಜೇಗೌಡರ ತೋಟದ ತೆಂಗಿನ ಮರ ಶನಿವಾರ ಅದೇ ಗ್ರಾಮದ ನಿಂಗಮ್ಮ ಅವರ ಮನೆಯ ಮೇಲೆ ಉರುಳಿದೆ. ಮನೆ ಜಖಂಗೊಂಡು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೆಂಗಿನ ಮರಗಳು ತೀರಾ ಹಳೆಯವಾಗಿದ್ದು, ಎತ್ತರವಾಗಿದ್ದವು. ಅವುಳನ್ನು ತೆರವುಗೊಳಿಸುವಂತೆ ಕೆಲ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT