ಮಧುಗಿರಿ: ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಬಿಎಂಟಿಸಿ ಬಸ್ ಚಾಲಕ ಕಲ್ಲು ತೂರಿದ ಘಟನೆ ತಾಲ್ಲೂಕಿನ ಬಸವನಹಳ್ಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಮಧುಗಿರಿಯಿಂದ ಬಸ್ ಡಿಪೊಗೆ ಹೋಗುತ್ತಿದ್ದ ಹಾಗೂ ಪಾವಗಡ ಮಾರ್ಗವಾಗಿ ಮಧುಗಿರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಬಿಎಂಟಿಸಿ ಬಸ್ ಚಾಲಕ ಮಲ್ಲಘಂಡ ಸಿಂಗ್ರಿ, ಬಸವನಹಳ್ಳಿಯ ನಟರಾಜು ಹಾಗೂ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ.
ಈ ಘಟನೆಯಿಂದ ಬಸ್‌ನ ಗಾಜು ಪುಡಿ ಪುಡಿಯಾಗಿದೆ. ಚಾಲಕರಾದ ನಾಗೇಶ್ ಮತ್ತು ಹನುಮಂತರಾಯಪ್ಪ ನೀಡಿದ ದೂರಿನ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.