ಮುಚ್ಚುವ ಹಂತ ತಲುಪಿದ್ದ ಈ ಸರ್ಕಾರಿ ಶಾಲೆಯಲ್ಲೀಗ ಮತ್ತೆ ಮಕ್ಕಳ ಕಲರವ ಕೇಳುತ್ತಿದೆ. ಖಾಸಗಿ ಶಾಲೆಗಳಂತೆಯೇ, ಹಳ್ಳಿಯ ಈ ಶಾಲೆಗೂ ಈಗ ಬಸ್ ವ್ಯವಸ್ಥೆ ಮಾಡಲಾಗಿದ್ದು, ಖುಷಿಯಿಂದ ಸ್ಕೂಲ್‌ಗೆ ಬರುತ್ತಿದ್ದಾರೆ ವಿದ್ಯಾರ್ಥಿಗಳು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೋಬಳಿಯಲ್ಲಿನ ದೊಡ್ಡಮಧುರೈ ಶಾಲೆ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ಬದಲಾವಣೆಗೆ ಕಾರಣ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.