ADVERTISEMENT

ಗ್ರಾಮಸ್ಥರೇ ಕೊರೆಸಿದರು ಕೊಳವೆಬಾವಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 16:27 IST
Last Updated 6 ಮೇ 2020, 16:27 IST
ಬೇತಮಂಗಲ ಕ್ಯಾಸಂಬಳ್ಳಿ ಹೋಬಳಿಯ ತೊಂಗಲಕುಪ್ಪ ಗ್ರಾಮದಲ್ಲಿ ಗ್ರಾಮಸ್ಥರೇ ಸ್ವಂತ ಹಣದಲ್ಲಿ ಕೊಳವೆ ಬಾವಿ ಕೊರೆಯಿಸಿದರು
ಬೇತಮಂಗಲ ಕ್ಯಾಸಂಬಳ್ಳಿ ಹೋಬಳಿಯ ತೊಂಗಲಕುಪ್ಪ ಗ್ರಾಮದಲ್ಲಿ ಗ್ರಾಮಸ್ಥರೇ ಸ್ವಂತ ಹಣದಲ್ಲಿ ಕೊಳವೆ ಬಾವಿ ಕೊರೆಯಿಸಿದರು   

ಬೇತಮಂಗಲ: ಕ್ಯಾಸಂಬಳ್ಳಿ ಹೋಬಳಿಯ ಕಂಗಾಡ್ಲಹಳ್ಳಿ ಗ್ರಾಮ ಪಂಚಾಯಿತಿಯ ತೊಂಗಲಕುಪ್ಪ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಯಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೆ ಹಣ ಹಾಕಿ ಕೊಳವೆ ಬಾವಿ ಕೊರೆಸಿಯಿದ್ದಾರೆ.

ಉತ್ತಮ ನೀರು ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

ಈಚೆಗೆ ಶಾಸಕಿ ಎಂ.ರೂಪಕಲಾ ಶಶಿಧರ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಜಯಪ್ರಕಾಶ್ ನಾಯ್ಡು ಅವರು ಒಂದೊಂದು ಕೊಳವೆ ಬಾವಿ ಕೊರೆಯಿ ಸಿದ್ದರು. ಎರಡರಲ್ಲೂ ನೀರು ಸಿಕ್ಕಿರಲಿಲ್ಲ.

ADVERTISEMENT

ಗ್ರಾಮಸ್ಥರು ಮತ್ತೊಂದು ಕೊಳವೆ ಬಾವಿ ಕೊರೆಯಿಸಲು ಇಬ್ಬರಲ್ಲೂ ಮನವಿ ಮಾಡಿಕೊಂಡರು. ಸ್ವಲ್ಪ ದಿನಗಳ ಬಳಿಕ ಕೊರೆಯಿಸುವುದಾಗಿ ಹೇಳಿದ್ದರು.

ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾದ ಕಾರಣ ಗ್ರಾಮಸ್ಥರೇ ಪ್ರತಿ ಮನೆಗೆ ಇಂತಿಷ್ಟು ಎಂದು ಹಣ ಸಂಗ್ರಹಿಸಿ ಕೊಳವೆ ಬಾವಿ ಕೊರೆಯಿಸಿದರು. ಇದರಲ್ಲಿ ಉತ್ತಮ ನೀರು ದೊರಕಿದ್ದು, ಗ್ರಾಮಸ್ಥರಲ್ಲಿ ಸ್ವಲ್ಪ ಮಟ್ಟಿಗೆ ಸಂತಸ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.