ಸಾಂದರ್ಭಿಕ ಚಿತ್ರ
ತುಮಕೂರು: ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದು ನಗರದ ದೇವರಾಯಪಟ್ಟಣದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಮಲೇಶ್ (36) ಆತ್ಮಹತ್ಯೆ ಮಾಡಿಕೊಂಡ ಯುವಕ. ನವೆಂಬರ್ 17ರಂದು ವಿಷ ಸೇವಿಸಿದ್ದರು, ಮಂಗಳವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನ.21 ಮತ್ತು 22ರಂದು ವಿವಾಹ ನಡೆಯಬೇಕಿತ್ತು. ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಮೃತಪಟ್ಟಿದ್ದಾರೆ.
ಮೂರು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ನಿಶ್ಚಿತಾರ್ಥದ ಸಮಯದಲ್ಲಿ ನೀಡಿದ್ದ ಉಂಗುರ ಕಳೆದುಕೊಂಡಿದ್ದರು. ಇದನ್ನು ಮನೆಯವರಿಗೆ ತಿಳಿಸಲು ಹೆದರಿ ವಿಷ ಸೇವಿಸಿದ್ದರು. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.