ADVERTISEMENT

ಹಣಕ್ಕೆ ಬೇಡಿಕೆ: ಇಬ್ಬರು ಯೂಟ್ಯೂಬರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 23:07 IST
Last Updated 15 ನವೆಂಬರ್ 2025, 23:07 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ಕುಣಿಗಲ್‌ (ತುಮಕೂರು): ಹಣಕ್ಕಾಗಿ ಹೋಟೆಲ್‌ ಮಾಲೀಕರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇರೆಗೆ ಇಬ್ಬರು ಯೂ ಟ್ಯೂಬ್‌ ವಾಹಿನಿಯ ಪತ್ರಕರ್ತರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ಯೂಟ್ಯೂಬ್‌ ವಾಹಿನಿ ಮಾಲೀಕ ಶಬ್ಬೀರ್‌, ವ್ಯವಸ್ಥಾಪಕ ನಿರ್ದೇಶಕಿ ಕುಸುಮಾ ಎಂಬುವರನ್ನು ಪೊಲೀಸರು ಶುಕ್ರವಾರ  ಬಂಧಿಸಿದ್ದಾರೆ.

ತಾಲ್ಲೂಕಿನ ನಾಗೇಗೌಡನಪಾಳ್ಯದ ತಾಜ್‌ ರೆಸ್ಟೋರೆಂಟ್‌ ಮಾಲೀಕ ಜಿಯಾವುಲ್ಲಾ ಎಂ.ಶೇಖ್‌ ನೀಡಿದ ದೂರಿನ ಮೇರೆಗೆ ಅಮೃತೂರು ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿತ್ತು. 

ADVERTISEMENT

‘ಮೇ 24ರಂದು ಒಬ್ಬ ಮಹಿಳೆ, ಮೂವರು ಪುರುಷರು ಹೋಟೆಲ್‌ನಲ್ಲಿ ಊಟ ಮಾಡಿ ಹೋಗಿದ್ದರು. ಅವರಿಗೆ ನೀಡಿದ್ದ ಊಟವನ್ನು ವಿಡಿಯೊ ಮಾಡಿಕೊಂಡಿದ್ದರು. 3 ದಿನದ ನಂತರ ಕುಸುಮಾ ಎಂಬುವರು ನನ್ನ ಜತೆ ಮೊಬೈಲ್‌ನಲ್ಲಿ ಮಾತನಾಡಿದ್ದರು’ ಎಂದು ಜಿಯಾವುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಿಮ್ಮ ಹೋಟೆಲ್‌ನಲ್ಲಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದೀರಿ, ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿವೆ. ಎಲ್ಲ ವಿಡಿಯೊ ನನ್ನ ಬಳಿ ಇವೆ. ಸುದ್ದಿ ಪ್ರಕಟಿಸದಿರಲು ಕಮರ್ಷಿಯಲ್‌ ನೀಡಬೇಕು’ ಎಂದು ಕುಸುಮಾ ಬೇಡಿಕೆ ಇಟ್ಟಿದ್ದರು ಎಂದು ದೂರು ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.