ADVERTISEMENT

ಕೃಷ್ಣ ಮಠದಲ್ಲಿ ಎಡೆಸ್ನಾನ: ದೇವರ ಪ್ರಸಾದದ ಮೇಲೆ ಉರುಳಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 9:21 IST
Last Updated 25 ನವೆಂಬರ್ 2017, 9:21 IST

ಉಡುಪಿ:ಚಂಪಾ ಷಷ್ಠಿಯ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಶುಕ್ರವಾರ ಎಡೆಸ್ನಾನ ಮಾಡಿದರು. ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಬೆಳಿಗ್ಗೆ ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಸುತ್ತಲೂ ದೇವರಿಗೆ ಎಡೆ ಇಡಲಾಯಿತು. ಗೋ ಪೂಜೆ ಮಾಡಿ ಅಕ್ಕಿ– ಬೆಲ್ಲ ನೀಡಿದ ನಂತರ ಭಕ್ತರು ಅದರ ಮೇಲೆ ಉರುಳಿದರು.

ಪೇಜಾವರ ಮಠದ ಆಡಳಿತ ಇರುವ ಮುಚ್ಲಕೋಡಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಮಧ್ಯಾಹ್ನ ಎಡೆಸ್ನಾನ ನಡೆಯಿತು. ಮಡೆಸ್ನಾನ ಮಾಡುವುದು ಬೇಡ ಎಂದು ನಿರ್ಧರಿಸಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಎಡೆಸ್ನಾನವನ್ನು ಆರಂಭಿಸಿದ್ದರು. ದೇವರ ಪ್ರಸಾದದ ಮೇಲೆ ಉರುಳುವ ಭಕ್ತರು ಹರಕೆ– ಸೇವೆ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT