ADVERTISEMENT

ಮತದಾನಕ್ಕೆ ಸಜ್ಜಾದ ಕಾಸರಗೋಡು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 7:00 IST
Last Updated 13 ಏಪ್ರಿಲ್ 2011, 7:00 IST

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ನಾಳೆ ಬೆಳಿಗ್ಗೆ 7ಗಂಟೆಗೆ ಆರಂಭವಾಗಲಿದೆ. ಜಿಲ್ಲೆಯ ಐದು ಕ್ಷೇತ್ರಗಳಾದ ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂ ಗಾಡು ಮತ್ತು ತೃಕ್ಕರಿಪುರ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳೂ ಸಜ್ಜಾಗಿವೆ.

ಮತಗಟ್ಟೆ ಸಹಿತ ವಿಧಾನಸಭಾ ಕ್ಷೇತ್ರದ ಹೆಸರು, ಮತಗಟ್ಟೆಯ ಸಂಖ್ಯೆ, ಅಭ್ಯರ್ಥಿಗಳ ಹೆಸರನ್ನೊಳಗೊಂಡ ನೋಟಿಸನ್ನು ಕನ್ನಡ ಮತ್ತು ಮಲ ಯಾಳದಲ್ಲಿ ಪ್ರಕಟಿಸಲಾಗಿದೆ.

ಮತದಾನ ಆರಂಭಗೊಳ್ಳುವ ಒಂದು ತಾಸಿಗೆ ಮೊದಲು ಆಯಾ ಅಭ್ಯರ್ಥಿಗಳ ಏಜೆಂಟರು, ಮತಗಟ್ಟೆ ಅಧಿಕಾರಿಗಳು, ಮತಗಟ್ಟೆಗೆ ತಲುಪಬೇಕು. ಏಜೆಂಟರಿಗೆ ಅಗತ್ಯವಿರುವ ಪಾಸ್ ವಿತರಿಸಿ ಬೆಳಿಗ್ಗೆ 6 ಗಂಟೆಗೆ ಮತದಾನದ ಅಭ್ಯಾಸ ಮಾಡ ಲಾಗುವುದು. ಪ್ರತಿ ಅಭ್ಯರ್ಥಿಗೆ ಸಮಾನ ಮತಗಳು ಎಂಬಂತೆ ಅಭ್ಯಾಸ ಮತ ದಾನದಲ್ಲಿ 100 ಮತದಾನ ಮಾಡಲಾ ಗುವುದು. ಬಳಿಕ  ಮತದಾನ ಯಂತ್ರವನ್ನು ಮತದಾನಕ್ಕೆ ಸಜ್ಜುಗೊಳಿಸ ಲಾಗುವುದು.

ಮತಗಟ್ಟೆಯಲ್ಲಿ ಸ್ತ್ರೀಯರು ಮತ್ತು ಪುರುಷರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿರುವ ಸ್ತ್ರೀಯರು, ಕುರುಡರು, ಅಸಹಾಯಕ ಮತದಾರರಿಗೆ ಮತದಾನ ಮಾಡಲು ಆದ್ಯತೆ ನೀಡಲಾಗುವುದು. ಬೆಳಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ನಿರಂತರ ಮತದಾನ ನಡೆಯಲಿದೆ. ಸಂಜೆ 5 ಗಂಟೆಗೆ ಯಾವುದಾದರೂ ಮತಗಟ್ಟೆ ಯಲ್ಲಿ ಸಾಲು ಕಂಡುಬಂದರೆ ಸಾಲಿನ ಹಿಂದಿನಿಂದ ಮುಂದಕ್ಕೆ ಟೋಕನ್ ವಿತರಿಸಿ, ಅವರಿಗೆ ಮಾತ್ರ ಮತದಾನ ಮಾಡಲು ಅವಕಾಶ ನೀಡಲಾಗುವುದು. 5 ಗಂಟೆಯ ಬಳಿಕ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುವುದಿಲ್ಲ.

ಮತದಾನ ಕಳೆದ ಬಳಿಕ ತಕ್ಷಣ ಮತದಾನ ಯಂತ್ರಕ್ಕೆ ಮುದ್ರೆ ಒತ್ತಿ, ಯಂತ್ರ ವಿತರಣೆ ಮಾಡಿದ ಕೇಂದ್ರಕ್ಕೆ ಸಾಗಿಸಲಾಗುವುದು  ಎಂದು ಜಿಲ್ಲಾಧಿ ಕಾರಿ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆ: 8,57,582 ಮತದಾರರು
ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಬುಧವಾರ  ನಡೆಯಲಿದ್ದು, ಜಿಲ್ಲೆಯಲ್ಲಿ 8,57,582 ಮತದಾರರು ಹಕ್ಕನ್ನು ಚಲಾಯಿಸುವ ಅವಕಾಶ ಪಡೆದಿದ್ದಾರೆ.ಇವರಲ್ಲಿ 4,42,297 ಮಂದಿ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 772 ಮತಗಟ್ಟೆಗಳಿದೆ. ಒಂದು ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿ ಮೂವರು ಮತಗಟ್ಟೆ ಅಧಿಕಾರಿಗಳಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯಲ್ಲಿ 4,108 ಮಂದಿ ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ. ಶೇ.25ರಷ್ಟು ಮಂದಿಯನ್ನು ಮೀಸಲಿಡಲಾಗಿದೆ. 1,200ಕ್ಕೂ ಅಧಿಕ ಮತದಾರರಿರುವ ಮತಗಟ್ಟೆಗೆ ಒಂದು ಮತಗಟ್ಟೆ ಅಧಿಕಾರಿಯನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಚುನಾವಣೆಗೆ 1,250 ಮತದಾನ ಯಂತ್ರವನ್ನು ಬಳಸಲಾಗುತ್ತಿದೆ.

ಚುನಾವಣಾ ಆಯೋಗ ನೇಮಕ ಮಾಡಿದ ಮೂವರು ನಿರೀಕ್ಷಕರು ಜಿಲ್ಲೆ ಯಲ್ಲಿದ್ದಾರೆ. ಜಿಲ್ಲೆಯಲ್ಲಿ ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡು ಮತ್ತು ತೃಕ್ಕರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36 ಅಭ್ಯರ್ಥಿಗಳ ಭವಿಷ್ಯ ಬುಧವಾರ ಸಂಜೆ ತೀರ್ಮಾನವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.