ADVERTISEMENT

ಸಂಸ್ಕೃತಿ, ಧಾರ್ಮಿಕತೆ ಪ್ರಜ್ಞೆಯಿಂದ ಸಾಮಾಜಿಕ ಶಾಂತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 9:00 IST
Last Updated 10 ಮಾರ್ಚ್ 2011, 9:00 IST

ಅಡ್ಕಸ್ಥಳ(ಬದಿಯಡ್ಕ): ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪ್ರಜ್ಞೆಯು ಪರಸ್ಪರ ನಿಕಟವಾದ ಸಂಬಂಧ ಹೊಂದಿದ್ದು, ಪರಸ್ಪರ ಆಸರೆಯಲ್ಲೇ ಬೆಳಗುತ್ತದೆ. ಇದನ್ನು ನಿತ್ಯ ಜೀವನದಲ್ಲಿ ಅಳವಡಿಸುವುದರಿಂದ ಸಾಮಾಜಿಕ ಶಾಂತಿ ಉಂಟಾಗುತ್ತದೆ ಎಂದು ನಿಟ್ಟೂರು ಡಾ. ಶಾಂತಾರಾಮ ಪ್ರಭು ಹೇಳಿದರು.

ಪೆರ್ಲ ಸಮೀಪದ ಮೊಗೇರು ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಾರಿಜಾ ಎಂ ನೇರೋಳು, ಕೊಕ್ಕೆಪುಣಿ ಸದಾಶಿವ ನಾಯಕ್, ರವೀಂದ್ರನಾಥ ನಾಯಕ್, ಸುನೀಲ್ ಬೋರ್ಕರ್ ಮುಂಡಕೊಚ್ಚಿ, ರಾಮಚಂದ್ರ ನಾಯಕ್, ಕುಕ್ಕಾಡಿ ಕಸ್ತೂರಿ ಉದಯಶಂಕರ ನಾಯಕ್, ಕುಂಡೇರಿ ಜಯಂತ ನಾಯಕ್ ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು.

ಕೀಲಂಗೋಡಿ ಅಣ್ಣಾ ವಿನಯಚಂದ್ರ ಬೆಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಕುಂದ ನಾಯಕ್, ಎಸ್.ಆರ್.ಸತೀಶ್ಚಂದ್ರ ಪುಣಚ, ಬಾಲಕೃಷ್ಣ ಬೋರ್ಕರ್, ನೀರೆ ರವೀಂದ್ರ ನಾಯಕ್, ಲಕ್ಷ್ಮಿ ಎನ್ ಬಾಂದೇಲ್‌ಕರ್, ಸೋಮಶೇಖರ ನಾಯಕ್, ಸರಸ್ವತಿ ಕಾಮತ್, ಮಮತಾ ಮನಮೋಹನ್ ಸುಳ್ಯ, ನೇರೋಳು ಸದಾಶಿವ ನಾಯಕ್, ಸುರೇಂದ್ರ ಬೋರ್ಕರ್, ರಾಧಾಕೃಷ್ಣ ಬೋರ್ಕರ್, ಯಶೋಧಾ ಕಾಂಚನ ಇದ್ದರು. ಕೈವಲ್ಯ ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮೀಜಿ ಗುರುವಾರ ಕ್ಷೇತ್ರಕ್ಕೆ ಆಗಮಿಸುವರು. ಬಳಿಕ ಧಾರ್ಮಿಕ ಸಭೆ ಹಾಗೂ ದೇವಿಯ ವಿಗ್ರಹ ಪ್ರತಿಷ್ಠೆ, ಮಹಾದ್ವಾರ ಉದ್ಘಾಟನೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.