ಉಡುಪಿ: `ಮಾನವರೆಲ್ಲರೂ ಸಮಾನರು ಎನ್ನುವ ಏಕತೆಯ ಸಂದೇಶವನ್ನು ಸಾರುವ ಪುಣ್ಯಯಾತ್ರೆ ಹಜ್.ದೇವ ಸಂಪ್ರೀತಿಗಾಗಿ ದಾಸನ ಸಹನೆ, ತ್ಯಾಗ ಮತ್ತು ಬಲಿದಾನದ ಉತ್ಕೃಷ್ಟತೆ ಇದರಲ್ಲಿ ಅಡಕವಾಗಿದೆ~ ಎಂದು ಇಸ್ಹಾಕ್ ಪುತ್ತೂರು ಇಲ್ಲಿ ಹೇಳಿದರು.
ಹಜ್ ಯಾತ್ರಾರ್ಥಿಗಳಿಗಾಗಿ ಜಮಾತೆ ಇಸ್ಲಾಮಿ ಹಿಂದ್‌ನ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಹಜ್ ವಿಧಿ-ವಿಧಾನಗಳ ಮಾರ್ಗದರ್ಶನ ಶಿಬಿರದಲ್ಲಿ `ಹಜ್‌ನ ಚೈತನ್ಯ~ ವಿಷಯದ ಕುರಿತು ಅವರು ಮಾತನಾಡಿದರು.
ಯಾತ್ರಾರ್ಥಿಗಳಿಗೆ ಮಂಗಳೂರಿನ ಯಹ್ಯಾ ತಂಙಳ್, ಅಬ್ದುಸ್ಸಲಾಂ ಉಪ್ಪಿನಂಗಡಿ ಹಾಗೂ ಜಾಮಿಯಾ, ತೋನ್ಸೆ ಆದಂ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಹ ಸಂಚಾಲಕ ಶಬ್ಬೀರ್ ಮಲ್ಪೆ, ಯು.ಅನ್ವರ್ ಅಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.