ADVERTISEMENT

ಉಡುಪಿ: 9 ಮಂದಿಗೆ ಕೋವಿಡ್‌

ಬಸ್‌ ಚಾಲಕರು, ಬಟ್ಟೆ ಅಂಗಡಿ ಮಾಲೀಕನಿಗೂ ಸೋಂಕು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:44 IST
Last Updated 30 ಜೂನ್ 2020, 15:44 IST

ಉಡುಪಿ: ಇಬ್ಬರು ಬಸ್‌ ಚಾಲಕರು ಹಾಗೂ ಒಬ್ಬರು ಬಟ್ಟೆ ಅಂಗಡಿ ಮಾಲೀಕ ಸೇರಿ ಮಂಗಳವಾರ 9 ಜನರಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡಿದೆ.

ಸೋಂಕಿತರಲ್ಲಿ ಮೂವರು ಮುಂಬೈನಿಂದ, ಒಬ್ಬರು ಹೈದರಾಬಾದ್‌ನಿಂದ ಹಾಗೂ ಅಂತರ ಜಿಲ್ಲಾ ಪ್ರಯಾಣ ಮಾಡಿದ ಮೂವರಿಗೆ ಹಾಗೂ ಸ್ಥಳೀಯ ಸೋಂಕಿತನ ಜತೆಗಿನ ಪ್ರಾಥಮಿಕ ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ.

ಬಸ್‌ ಚಾಲಕರಿಗೆ ಕೊರೊನಾ:ಕುಂದಾಪುರ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ಚಾಲಕರಿಗೆ ಸೋಂಕು ತಗುಲಿದೆ. ಬಟ್ಟೆ ಅಂಗಡಿ ಮಾಲೀಕರೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅವರ ಪುತ್ರ ಬೆಂಗಳೂರಿಗೆ ಹೋಗಿಬಂದಿರುವುದರಿಂದ ಗಂಟಲ ದ್ರವವನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಈ ಮೂರು ಪ್ರಕರಣಗಳ ಬಗ್ಗೆ ಬಹಳ ಎಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ADVERTISEMENT

288 ಮಾದರಿ ಸಂಗ್ರಹ:ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ, ಶೀತ ಜ್ವರದ ಲಕ್ಷಣಗಳಿದ್ದ 288 ಜನರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 15 ಮಂದಿ ಐಸೊಲೇಷನ್‌ ವಾರ್ಡ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1206ಕ್ಕೇರಿಕೆಯಾಗಿದೆ. ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.