
ಪ್ರಜಾವಾಣಿ ವಾರ್ತೆ
ಕುಂದಾಪುರ: ಜ. 25ರಂದು ಪುದುಚೆರಿಯಲ್ಲಿ ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ ರಾಷ್ಟ್ರಮಟ್ಟದ 21ನೇ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯ ಜೆಡ್ಆರ್‌ಎಲ್ ವಿಭಾಗದಲ್ಲಿ ನಮಸ್ಯಾ ಸುರೇಶ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದಾಳೆ.
ನಮಸ್ಯಾ ಭಟ್ಕಳದ ಸುರೇಶ್ ಕುಮಾರ್ ನಾಯ್ಕ, ಭಂಡಾರ್‌ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ ಸುಮಲತಾ ಸುರೇಶ್ ದಂಪತಿ ಪುತ್ರಿ. ಕುಂದಾಪುರದ ಓಕ್ ವುಡ್ ಇಂಡಿಯನ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ. ನಮಸ್ಯಾಗೆ ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕುಂದಾಪುರ ಕೇಂದ್ರದ ಮುಖ್ಯಸ್ಥ ಪ್ರಸನ್ನ ಕೆ.ಬಿ, ಬೋಧಕರಾದ ಮಹಾಲಕ್ಷ್ಮಿ, ದೀಪಾ ತರಬೇತಿ ನೀಡಿದ್ದರು. ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳ 2,200 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.