ADVERTISEMENT

ನಿಸ್ವಾರ್ಥ ಸೇವೆಗೆ ‘ಅಲಯನ್ಸ್‌’ ಪ್ರೇರಣೆ: ನಾಗರಾಜ ಬಾಯರಿ

ಹೆಬ್ರಿ ಅಲಯನ್ಸ್‌ ಕ್ಲಬ್‌, ಲೇಡಿ ಅಲಯನ್ಸ್ ಕ್ಲಬ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:20 IST
Last Updated 28 ಡಿಸೆಂಬರ್ 2025, 5:20 IST
ಹೆಬ್ರಿ ಶ್ರೀಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಶುಕ್ರವಾರ ಅಲಯನ್ಸ್‌ ಕ್ಲಬ್‌ ಹೆಬ್ರಿ ಮತ್ತು ಅಲಯನ್ಸ್‌ ಕ್ಲಬ್‌ ಹೆಬ್ರಿ ಸಿಟಿ ನೂತನ ಘಟಕದ ಉದ್ಘಾಟನೆ ಮತ್ತು ನೂತನ ತಂಡದ ಪದಗ್ರಹಣ ಸಮಾರಂಭವನ್ನು ಅಲಯನ್ಸ್‌ ಕ್ಲಬ್‌ ಇಂಟರ್‌ ನ್ಯಾಶನಲ್‌ ಡೈರೆಕ್ಟರ್‌ ಡಾ. ನಾಗರಾಜ ವಿ. ಬಾಯರಿ ಉದ್ಘಾಟಿಸಿದರು. 
ಹೆಬ್ರಿ ಶ್ರೀಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಶುಕ್ರವಾರ ಅಲಯನ್ಸ್‌ ಕ್ಲಬ್‌ ಹೆಬ್ರಿ ಮತ್ತು ಅಲಯನ್ಸ್‌ ಕ್ಲಬ್‌ ಹೆಬ್ರಿ ಸಿಟಿ ನೂತನ ಘಟಕದ ಉದ್ಘಾಟನೆ ಮತ್ತು ನೂತನ ತಂಡದ ಪದಗ್ರಹಣ ಸಮಾರಂಭವನ್ನು ಅಲಯನ್ಸ್‌ ಕ್ಲಬ್‌ ಇಂಟರ್‌ ನ್ಯಾಶನಲ್‌ ಡೈರೆಕ್ಟರ್‌ ಡಾ. ನಾಗರಾಜ ವಿ. ಬಾಯರಿ ಉದ್ಘಾಟಿಸಿದರು.    

ಹೆಬ್ರಿ: ಜನಸೇವೆಗೆ ಅಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಉತ್ತಮ ಅವಕಾಶ. ನಿಸ್ವಾರ್ಥ ಸೇವೆಗೆ ಅಲಯನ್ಸ್‌ ಕ್ಲಬ್‌ನಲ್ಲಿ ಅವಕಾಶವಿದ್ದು ಕ್ಯಾನ್ಸರ್‌ ಜನಜಾಗೃತಿ ಮತ್ತು ಅನಾಥಾಶ್ರಮಗಳಲ್ಲಿ ಸೇವೆಯನ್ನು ಅಲಯನ್ಸ್‌ ಮಾಡಲಿದೆ ಎಂದು ಅಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ನಿರ್ದೇಶಕ ನಾಗರಾಜ ವಿ. ಬಾಯರಿ ಹೇಳಿದರು.

ಹೆಬ್ರಿಯಲ್ಲಿ ಅಲಯನ್ಸ್‌ ಕ್ಲಬ್‌ ಹೆಬ್ರಿ ಮತ್ತು ಅಲಯನ್ಸ್‌ ಕ್ಲಬ್‌ ಹೆಬ್ರಿ ಸಿಟಿ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೆಬ್ರಿ ಅಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ. ರಾಮಚಂದ್ರ ಭಟ್‌ ಮಾತನಾಡಿದರು. ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್‌ ಹಾಗೂ ಗುರುತಿನ ಕಾರ್ಡ್‌ ವಿತರಣೆ ನಡೆಯಿತು.

ADVERTISEMENT

ರಾಜ್ಯ ಸಂಪನ್ಮೂಲ ವ್ಯಕ್ತಿ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್‌, ಅಲಯನ್ಸ್‌ ಕ್ಲಬ್‌ ಜಿಲ್ಲಾ ಗವರ್ನರ್ ಸುನೀಲ್‌ ಸಾಲ್ಯಾನ್‌, ಜಿಲ್ಲಾ ಸಲಹೆಗಾರ ಶ್ರೀಧರ ಸೇಣವ, ಅಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಸಮಿತಿ ಸದಸ್ಯ ಮುನಿಯಪ್ಪ, ಅಲಯನ್ಸ್‌ ಕ್ಲಬ್‌  ಉಪ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ, ಜಿಲ್ಲಾ ಉಪ ಗವರ್ನರ್‌ ಕೆ.ಸುಧಾಕರ ಹೆಗ್ಡೆ, ಸಂಪುಟ ಕಾರ್ಯದರ್ಶಿ ಜಗದೀಶ ಹೊಳ್ಳ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯರಾಮ ಆಚಾರ್ಯ, ವಲಯಾಧ್ಯಕ್ಷ ಸಂತೋಷ್ ಕುಮಾರ್ ಬೈಲೂರು, ಅಲಯನ್ಸ್‌ ಕ್ಲಬ್‌ ಹೆಬ್ರಿ ಕಾರ್ಯದರ್ಶಿ ಬಾಲಚಂದ್ರ ಮುದ್ರಾಡಿ, ಕೋಶಾಧಿಕಾರಿ ಸುರೇಶ ಪೂಜಾರಿ, ಹೆಬ್ರಿ ಲೇಡಿ ಅಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಸುನೀತಾ ಹೆಬ್ಬಾರ್‌, ಕಾರ್ಯದರ್ಶಿ ರಮ್ಯಾಕಾಂತಿ, ಕೋಶಾಧಿಕಾರಿ ಅಮೃತಾ ಉಪಸ್ಥಿತರಿದ್ದರು. ಬಲ್ಲಾಡಿ ಚಂದ್ರಶೇಖರ ಭಟ್‌ ನಿರೂಪಿಸಿ ಸುನೀತಾ ಹೆಬ್ಬಾರ್‌ ಸ್ವಾಗತಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.