ಬಾರ್ಕೂರ(ಬ್ರಹ್ಮಾವರ): ಕರ್ನಾಟಕ ಕರಾವಳಿ ಪದ್ಮಶಾಲಿ/ಶೆಟ್ಟಿಗಾರರ ಮೂಲ ಕ್ಷೇತ್ರ ಬಾರ್ಕೂರು ಬ್ರಹ್ಮಲಿಂಗವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧರ್ಮದರ್ಶಿಗಳ ಚಿಂತನಾ ಸಭೆ ನಡೆಯಿತು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್ ಉದ್ಘಾಟಿಸಿ ಮಾತನಾಡಿ, ‘ದೇವಾಲಯದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಸರ್ವರೂ ಪಾಲ್ಗೊಂಡು, ಸಮಾಜದಲ್ಲಿ ಒಗ್ಗಟ್ಟು ಮೂಡಿಸುವಂತಹ ಮಾದರಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ’ ಕೋರಿದರು.
ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಎನ್.ರಮೇಶ ಭಟ್ ಮಾತನಾಡಿ, ‘ಸಮಾಜದ ಸಂಪೂರ್ಣ ಅಭಿವೃದ್ಧಿಯಾಗಬೇಕಾದರೆ ಮೂಲ ಕ್ಷೇತ್ರದ ಬಗ್ಗೆ ಚಿಂತನೆ ಆಗಬೇಕು. ಮೂಲ ಕ್ಷೇತ್ರ ಮತ್ತು ಇತರ 15 ದೇವಸ್ಥಾನಗಳು ಮರದ ಬೇರು ಮತ್ತು ಕೊಂಬೆ ಇದ್ದಂತೆ’ ಎಂದರು.
ಬಾರ್ಕೂರು ಬ್ರಹ್ಮಲಿಂಗವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಪಡುಬಿದ್ರಿಯ ಸುಂದರ ಶೆಟ್ಟಿಗಾರ್, ಸಾಲಿಜೇರಿಯ ಸುರೇಶ್ ಶೆಟ್ಟಿಗಾರ್, ಹಳೆಯಂಗಡಿಯ ರತ್ನಾಕರ ಶೆಟ್ಟಿಗಾರ್, ಬಂಗ್ಲ ಮಂಜೇಶ್ವರದ ಹರೀಶ್ಚಂದ್ರ ಶೆಟ್ಟಿಗಾರ್, ಕಿನ್ನಿಮುಲ್ಕಿಯ ಪ್ರಭಾಶಂಕರ, ಕಾಪು ಜಯಕರ ಶೆಟ್ಟಿಗಾರ್, ಕಲ್ಯಾಣಪುರದ ಜ್ಯೋತಿಪ್ರಸಾದ್ ಶೆಟ್ಟಿಗಾರ, ಮುಲ್ಕಿಯ ಡಿ.ಪುರಂದರ ಶೆಟ್ಟಿಗಾರ್, ಎರ್ಮಾಳು ವಿವೇಕ್ ಬಿ.ಎಸ್, ಉಳ್ಳಾಲದ ಐತಪ್ಪ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಮಾಜಿ ಅಧ್ಯಕ್ಷ ರಾಮದಾಸ ಶೆಟ್ಟಿಗಾರ ಪಣಿಯಾಡಿ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಕೊಡಿಯಾಲ್ ಬೈಲು ಇದ್ದರು.
ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಶೆಟ್ಟಿಗಾರ ಸ್ವಾಗತಿಸಿದರು. ಮಾಜಿ ಮೊಕ್ತೇಸರ ಪುರುಷೋತ್ತಮ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿಗಾರ್ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್.ಎ ಗೋಪಾಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.