ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌: ನೋಡೆಲ್‌ ಅಧಿಕಾರಿಗಳ ನೇಮಕ

ಸೋಂಕಿತರಿಗೆ ಅಗತ್ಯ ಆಮ್ಲಜನಕ ಬೆಡ್‌ಗಳ ವ್ಯವಸ್ಥೆ ಮಾಡಲು ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್‌

​ಪ್ರಜಾವಾಣಿ ವಾರ್ತೆ
Published 5 ಮೇ 2021, 19:30 IST
Last Updated 5 ಮೇ 2021, 19:30 IST
ಜಿ. ಜಗದೀಶ್‌
ಜಿ. ಜಗದೀಶ್‌   

ಉಡುಪಿ: ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಸಂದರ್ಭ ಅವರಿಗೆ ಬೆಡ್‌ಗಳನ್ನು ವ್ಯವಸ್ಥೆ ಮಾಡಲು ಹಾಗೂ ತೀರಾ ಅಗತ್ಯವಿದ್ದಲ್ಲಿ ಆಮ್ಲಜನಕ ವ್ಯವಸ್ಥೆ ಹೊಂದಿರುವ ಬೆಡ್‌ಗಳ ವ್ಯವಸ್ಥೆ ಮಾಡಲು ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಸೋಂಕಿತ ವ್ಯಕ್ತಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಲು ವ್ಯವಸ್ಥೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಮತ್ತು ಐಸಿಯು ಸಂಖ್ಯೆಗಳ ಆಧಾರದಲ್ಲಿ ಸರ್ಕಾರಿ ಕೋಟವನ್ನು ನಿಗಧಿ ಪಡಿಸಲಾಗಿದೆ. ಆದರೂ ಕೆಲವು ಆಸ್ಪತ್ರೆಗಳು ಸರ್ಕಾರಿ ಕೋಟದ ಬೆಡ್‌ಗಳನ್ನು ನೀಡದಿರುವುದು ಗಮನಕ್ಕೆ ಬಂದಿದ್ದು, ತೀರಾ ಆತಂಕಕಾರಿ ವಿಚಾರವಾಗಿದೆ.

ಕೋವಿಡ್-19‌ ಎರಡನೆಯ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಜಿಲ್ಲಾಡಳಿತಕ್ಕೆ ತೊಂದರೆ ಉಂಟಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಬಾಧಿತರು ದಾಖಲಾಗುವ ಸಂದರ್ಭ ಬೆಡ್ ವ್ಯವಸ್ಥೆ ಹಾಗೂ ಅಗತ್ಯವಿದ್ದವರಿಗೆ ಆಮ್ಲಜನಕ ಆಧಾರಿತ ಬೆಡ್‌ಗಳ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ನೀಡಲಾಗುತ್ತಿದೆಯೇ, ಚಿಕಿತ್ಸೆ ದೊರೆಯುತ್ತಿದೆಯೇ ಎಂದು ಪರಿಶೀಲನೆ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಆದರ್ಶ ಆಸ್ಪತ್ರೆ ಕುಂದಾಪುರ–ಭಾನು ನಾಯ್ಕ 9743177854, ಚಿನ್ಮಯ ಆಸ್ಪತ್ರೆ ಕುಂದಾಪುರ– ಡಾ.ಸೂರ್ಯನಾರಾಯಣ ಉಪಾಧ್ಯ 9448850501, ನ್ಯೂ ಮೆಡಿಕಲ್ ಸೆಂಟರ್‌– ಕುಂದಾಪುರ ಹರ್ಷವರ್ಧನ 9844818655, ಶ್ರೀದೇವಿ ನರ್ಸಿಂಗ್ ಹೋಂ ಕುಂದಾಪುರ– ಸಿ ರಘುರಾಮ ಶೆಟ್ಟಿ 8277932519, ಮಂಜುನಾಥ ಆಸ್ಪತ್ರೆ ಕುಂದಾಪುರ– ಕುಸುಮಾಕರ ಶೆಟ್ಟಿ 9611819350, ಸರ್ಜನ್ಸ್‌ ಆಸ್ಪತ್ರೆ ಕೋಟೇಶ್ವರ–ರಾಜೇಂದ್ರ 94484457831, ವಿನಯ್ ಆಸ್ಪತ್ರೆ ಕುಂದಾಪುರ– ಅಶೋಕ್ 8971138955, ಡಾ.ಎನ್‌.ಆರ್‌.ಆಚಾರ್ಯ ಆಸ್ಪತ್ರೆ ಕೋಟೇಶ್ವರ–ಪ್ರೀತಮ್ 8277721129, ಆದರ್ಶ ಆಸ್ಪತ್ರೆ ಉಡುಪಿ– ಅರುಣ್ ಕುಮಾರ್ 9448287341, ಸಿಟಿ ಆಸ್ಪತ್ರೆ ಹಾಗೂ ಡಯಾಗ್ನೋಸ್ಟಿಕ್ ಸೆಂಟರ್‌ ಉಡುಪಿ–ವೀಣಾ 9611282731, ಗಾಂಧಿ ಆಸ್ಪತ್ರೆ ಉಡುಪಿ– ದೇವಿಪ್ರಸಾದ್‌ 9480878012, ಹೈಟೆಕ್‌ ಆಸ್ಪತ್ರೆ ಉಡುಪಿ– ಭುವನೇಶ್ವರಿ 9448999225, ಕಸ್ತೂರಬಾ ಆಸ್ಪತ್ರೆ ಮಣಪಾಲ್‌– ಅನಿತಾ ಬಿ. ಮುಂಡ್ಳೂರು 9243388835, ಮಿಷನ್ ಆಸ್ಪತ್ರೆ ಉಡುಪಿ– ವಿಜಯ ಹೆಗ್ಡೆ 9845380806, ನ್ಯೂ ಸಿಟಿ ಆಸ್ಪತ್ರೆ ಉಡುಪಿ– ನಾಗಶಯನ 9480346084, ಟಿಎಂಎ ಪೈ ಆಸ್ಪತ್ರೆ ಉಡುಪಿ– ಅಶೋಕ್ 9448624164, ಪ್ರಣವ್ ಆಸ್ಪತ್ರೆ ಬ್ರಹ್ಮಾವರ– ಗುರುದತ್ 9964669016, ಮಹೇಶ್ ಆಸ್ಪತ್ರೆ ಬ್ರಹ್ಮಾವರ– ಕುಮಾರ್‌ ಬೆಕ್ಕೇರಿ 9632959459 ಅವರನ್ನು ನೋಡೆಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.

ಎಲ್ಲ ನೋಡೆಲ್‌ ಅಧಿಕಾರಿಗಳು ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕರ್ತವ್ಯದಲ್ಲಿ ಲೋಪಕ್ಕೆ ಅವಕಾಶವಿಲ್ಲದಂತೆ ಮಾಡಬೇಕು. ತಪ್ಪಿದರೆ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರ ಅಡಿ ಹಾಗೂ ಎಪಿಡಮಿಕ್ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.