
ಉಡುಪಿ: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಪಿತ್ರೋಡಿ ಹಾಗೂ ಮಟ್ಟು ಪರಿಸರದಲ್ಲಿ ಶನಿವಾರ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು.
ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 23 ಪ್ರಬೇಧಗಳ 219 ಹಕ್ಕಿಗಳನ್ನು ಪಟ್ಟಿ ಮಾಡಿದರು.
ಅದರಲ್ಲಿ ಬ್ಲಾಕ್ ಹೆಡೆಡ್ ಐಬಿಸ್, ಗುಲಾಬಿ ಕೊರಳಿನ ಗಿಳಿ, ಸಣ್ಣ ಕುಟ್ರ, ಕಾಡು ಗೊರವಂಕ, ಚುಕ್ಕೆ ಬೆಳವ, ಗದ್ದೆ ಮಿಂಚುಳ್ಳಿ, ನೀಲಿ ಮಿಂಚುಳ್ಳಿ, ಕೆಂಪು ಟಿಟ್ಟಿಭ, ದೊಡ್ಡ ಬೆಳ್ಳಕ್ಕಿ, ಕೊಳದ ಬಕ, ಗಲ್ ಸೇರಿದಂತೆ 23 ಪ್ರಬೇಧಗಳು ಒಳಗೊಂಡಿವೆ.
ಬಳಿಕ ಮಟ್ಟು ಗುಳ್ಳ ಬೆಳೆಗಾರರ ಜತೆ ಸಂವಾದ ನಡೆಯಿತು. ಮಟ್ಟು ಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಮಟ್ಟು ಲಕ್ಷ್ಮಣ್, ಗಿರೀಶ್ ಆಚಾರ್, ಪ್ರತಿಮಾ ಆಚಾರ್, ಮೇಧಾ ನಾಯಕ್, ರಮ್ಯಾ ಕಾಮತ್, ರಾಜಶ್ರೀ ಎಸ್., ವೈಭವ್ ಯಡಿಯಾಳ್, ವಿದ್ಯಾಶ್ರೀ ಎಸ್., ಪ್ರಸನ್ನ ಉದ್ಯಾವರ ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ಸಂಯೋಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.