
ಪ್ರಜಾವಾಣಿ ವಾರ್ತೆಬಿ.ಸುಧಾಕರ ಶೆಟ್ಟಿ
ಉಡುಪಿ: ಬಿಜೆಪಿ ಮುಖಂಡ ಹಾಗೂ ಹೋಟೆಲ್ ಉದ್ಯಮಿ ಬಿ.ಸುಧಾಕರ ಶೆಟ್ಟಿ (72) ಗುರುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬರು ಪುತ್ರಿ ಇದ್ದಾರೆ.
ಶಾರದಾ ಇಂಟರ್‌ನ್ಯಾಷನಲ್ ಹೋಟೆಲ್ ಮಾಲೀಕರಾಗಿದ್ದ ಸುಧಾಕರ ಶೆಟ್ಟಿ ಹೋಟೆಲ್ ಉದ್ಯಮದ ಜತೆಗೆ ರಾಜಕೀಯವಾಗಿಯೂ ಬೆಳೆದಿದ್ದರು.
2009ರಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
1999, 2004 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.