
ಬ್ರಹ್ಮಾವರ: ಚೇರ್ಕಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶಿವರಾತ್ರಿ ಹಬ್ಬ, ಸರೋಜಿನಿ ನಾಯ್ಡು ಜಯಂತಿ ಆಚರಿಸಲಾಯಿತು.
ಮುಖ್ಯಶಿಕ್ಷಕಿ ಪೂರ್ಣಿಮಾ ಎಸ್.ಡಿ. ಅವರು ಸರೋಜಿನಿ ನಾಯ್ಡು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ವಿದ್ಯಾರ್ಥಿ ಅಮೀನ್ ಎಸ್.ಎಂ. ಸರೋಜಿನಿ ನಾಯ್ಡು ಅವರ ಜೀವನ, ಸಾಧನೆ ಕುರಿತು ಪರಿಚಯ ನೀಡಿದರು.
ಬಳಿಕ ಶಿವನ ಪೂಜಾ ವಿಧಿವಿಧಾನಗಳಿಂದ ಶಿವರಾತ್ರಿ ಹಬ್ಬದ ಆಚರಣೆ ಆರಂಭಗೊಂಡಿತು. ವಿದ್ಯಾರ್ಥಿ ಕೌಶಿಕ್ ಶಿವರಾತ್ರಿ ಹಬ್ಬದ ವಿಶೇಷತೆ, ಹಬ್ಬಕ್ಕೆ ಸಂಬಂಧಿಸಿದ ಹಿನ್ನೆಲೆ ಕಥೆ, ಆಚರಿಸುವ ಬಗೆಯ ಕುರಿತು ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ಶಿವನ ಮಹಿಮೆ ಸಾರುವ ಸಮೂಹ ಗಾಯನ, ನೃತ್ಯರೂಪಕಗಳು ಮೂಡಿಬಂದವು.
ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ಉಡುಪಿಯ ಆಡಳಿತ ಅಧಿಕಾರಿ ಸುರೇಶ ಹೆಜಮಾಡಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕೌಶಿಕ್ ಸಿ. ಪೂಜಾರಿ, ರಚನಾ ನಾಯ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.