ADVERTISEMENT

ಬ್ರಹ್ಮಾವರ: ಇವಿಎಂ ಆ್ಯಪ್ ಬಳಸಿ ವಿದ್ಯಾರ್ಥಿ ಸಂಸತ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 13:01 IST
Last Updated 1 ಜುಲೈ 2023, 13:01 IST
ಬ್ರಹ್ಮಾವರ ತಾಲ್ಲೂಕಿನ ನಿರ್ಮಲಾ ಪಿಯು ಕಾಲೇಜಿನಲ್ಲಿ ಇವಿಎಂ ಆ್ಯಪ್ ಬಳಸಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಸಲಾಯಿತು
ಬ್ರಹ್ಮಾವರ ತಾಲ್ಲೂಕಿನ ನಿರ್ಮಲಾ ಪಿಯು ಕಾಲೇಜಿನಲ್ಲಿ ಇವಿಎಂ ಆ್ಯಪ್ ಬಳಸಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಸಲಾಯಿತು   

ಬ್ರಹ್ಮಾವರ: ತಾಲ್ಲೂಕಿನ ನಿರ್ಮಲಾ ಪಿಯು ಕಾಲೇಜಿನಲ್ಲಿ ಇವಿಎಂ ಆ್ಯಪ್ ಬಳಸಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಮತ್ತು ಮತದಾನದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಅರಿವು ಮೂಡಿಸುವ ಉದ್ದೇಶದಿಂದ ಇವಿಎಂ ಬಳಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಬ್ಯಾಲೆಟ್ ಯುನಿಟ್‌ನಲ್ಲಿ ಮತ ಚಲಾಯಿಸಿದರು. ತಮ್ಮ ಆಯ್ಕೆಯ ಅಭ್ಯರ್ಥಿಯ ಮುಂದೆ ಬ್ಯಾಲೆಟ್ ಒತ್ತಿದಾಗ ಬೀಪ್ ಸೌಂಡ್ ಹಾಗೂ ತಮ್ಮ ಅಭ್ಯರ್ಥಿಯ ಹೆಸರು, ಪೋಟೋ ಕಾಣಿಸಿದಾಗ ಮತ ಬಿದ್ದಿರುವುದನ್ನು ಖಾತರಿಪಡಿಸಿಕೊಂಡರು.

ವಿದ್ಯಾರ್ಥಿ ನಾಯಕ/ನಾಯಕಿ ಸ್ಥಾನಕ್ಕೆ ನಾಲ್ಕು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ನಾಯಕಿಯಾಗಿ ವೀಕ್ಷಾ ಶೆಟ್ಟಿ, ಉಪನಾಯಕಿಯಾಗಿ ದಿವ್ಯಾ ಜ್ಯೋತಿ ಆಯ್ಕೆಯಾದರು. ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಪ್ರತೀಕ್ಷಾ, ಶಾಂತಿ, ಚಂದನ, ಆದಿತ್ಯ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.