
ಹೆಬ್ರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರತಿ ಮನೆಯಲ್ಲಿ ಧಾರ್ಮಿಕ ಶಿಸ್ತು, ಧರ್ಮದ ಅರಿವು, ಹೆತ್ತವರನ್ನು ನಡೆಸಿಕೊಳ್ಳುವ ಬಗ್ಗೆ ಕ್ರಾಂತಿ ನಡೆದಿದೆ. ಇವುಗಳಿಂದಾಗಿ ಜನರು ಕೆಟ್ಟ ಮಾರ್ಗ ಬಿಟ್ಟು, ಧರ್ಮ ಮಾರ್ಗದಲ್ಲಿ ನಡೆಯುವುದರಿಂದ ಕಾನೂನಿನ ಮೊರೆ ಹೋಗಬೇಕಾದ ಅವಶ್ಯಕತೆ ಯಾರಿಗೂ ಇಲ್ಲ ಎಂದು ಉದ್ಯಮಿ ಸತೀಶ್ ಪೈ ಹೇಳಿದರು.
ಅವರು ಚಾರದಲ್ಲಿ ಭಾನುವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಚಾರ ವಲಯದ ಸಾಮೂಹಿಕ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಸರ್ಕಾರ ಮಾಡದಿರುವ ಕೆಲಸಗಳನ್ನು ಯೋಜನೆ ಮಾಡಿದೆ. ಜಾತಿ, ಧರ್ಮ, ಶ್ರೀಮಂತ, ಬಡವ ಎನ್ನದೆ ಪ್ರತಿಯೊಬ್ಬರ ಕಣ್ಣೀರು ಒರೆಸುವ ಕೆಲಸ ಆಗಿದೆ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ನಾವೆಲ್ಲರೂ ಧ್ವನಿಯಾಗಬೇಕು ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜೆ, ವಿವಿಧ ಒಕ್ಕೂಟಗಳ ಪದಗ್ರಹಣ ನಡೆಯಿತು. ನಾಗರಾಜ್ ಜೋಯಿಸ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಸಾಮೂಹಿಕ ಸತ್ಯನಾರಾಯಣ ಪೂಜೆ ಸಮಿತಿ ಅಧ್ಯಕ್ಷ ಚಾರ ವಾದಿರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಾರ ವಾದಿರಾಜ ಶೆಟ್ಟಿ, ಪ್ರಗತಿ ಬಂಧು ಸಹಾಯ ಸಂಘದವರನ್ನು ಗೌರವಿಲಾಯಿತು.
ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿ ನಿರ್ದೇಶಕ ಶಿವರಾಮ್, ಉದಯ ಕೃಷ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಯೋಜನಾಧಿಕಾರಿ ಲೀಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ನಾಯ್ಕ್, ಪ್ರಮುಖರಾದ ಪ್ರವೀಣ್ ಹೆಗ್ಡೆ, ಸುರೇಶ್ ರಾವ್, ಚಂದ್ರನಾಯ್ಕ, ಹರ್ಷ ಶೆಟ್ಟಿ, ಮೋಹನ್ ದಾಸ್ ನಾಯಕ್, ಜಗನ್ನಾಥ ಕುಲಾಲ್, ರಮೇಶ್ ಪೂಜಾರಿ ಇದ್ದರು.
ಕೃಷಿ ಅಧಿಕಾರಿ ಉಮೇಶ್ ನಿರೂಪಿಸಿದರು. ಮೇಲ್ವಿಚಾರಕಿ ರೇವತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.