ADVERTISEMENT

ಬೈಂದೂರು: ಹಸಿದವರಿಗೆ ಅನ್ನ ನೀಡುವ ಸಾಯಿನಾಥ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 4:34 IST
Last Updated 7 ಜೂನ್ 2021, 4:34 IST
ಶನಿವಾರ ಹೊಸಾಡು ಮುಳ್ಳಿಕಟ್ಟೆಯಲ್ಲಿ ಗುಡಿಸಲು ನಿವಾಸಿಗಳಿಗೆ ಸಾಯಿನಾಥ ಶೇಟ್ ಊಟದ ಪಾಕೇಟ್‌ ವಿತರಿಸಿದರು
ಶನಿವಾರ ಹೊಸಾಡು ಮುಳ್ಳಿಕಟ್ಟೆಯಲ್ಲಿ ಗುಡಿಸಲು ನಿವಾಸಿಗಳಿಗೆ ಸಾಯಿನಾಥ ಶೇಟ್ ಊಟದ ಪಾಕೇಟ್‌ ವಿತರಿಸಿದರು   

ಬೈಂದೂರು: ಕುಂದಾಪುರದಲ್ಲಿ ಚಿನ್ನ, ಬೆಳ್ಳಿ ಒಡವೆ ಸಿದ್ಧಪಡಿಸಿ ಮಾರುವ ಸಾಯಿನಾಥ ಶೇಟ್ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿರ್ಗತಿಕರು, ಕಡು ಬಡವರು, ಭಿಕ್ಷುಕರು ಮತ್ತು ಅಶಕ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ. ಅವರು ನಡೆಸುತ್ತಿರುವ ಈ ಅನ್ನದಾಸೋಹ ಶನಿವಾರ 41 ದಿನ ಪೂರೈಸಿದೆ. ಯಾವುದೇ ಪ್ರಚಾರ ಬಯಸದೆ ಅವರು ಇದನ್ನು ಮಾಡುತ್ತಿದ್ದಾರೆ.

ಪ್ರತಿದಿನ 150 ಕ್ಕೂ ಅಧಿಕ ಊಟದ ಪೊಟ್ಟಣಗಳನ್ನು ಸ್ಕೂಟರ್‌ನಲ್ಲಿ ಹಾಕಿಕೊಂಡು ರಸ್ತೆ ಬದಿಯಲ್ಲಿ ಹಸಿದವರಿಗೆ ವಿತರಿಸುತ್ತಾರೆ.

ಶನಿವಾರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಬಯಲಿನ ಗುಡಿಸಿಲಿನಲ್ಲಿ ದಿನ ಕಳೆಯುತ್ತಿರುವ ಅಲೆಮಾರಿಗಳಿಗೆ ಊಟದ ಪ್ಯಾಕೆಟ್‌ ವಿತರಿಸಿದರು.

ADVERTISEMENT

’ನಾನು ದುಡಿಮೆಯಿಂದ ಜೀವನ ನಡೆಸುವ ಸಾಮಾನ್ಯ ವ್ಯಕ್ತಿ, ಹಸಿವೆ ಸಂಕಟದ ಅನುಭವ ಇದೆ.ಆದ್ದರಿಂದ ಲಾಕ್‌ಡೌನ್ ಸಂದರ್ಭ ಯಾರು ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಹಲವರ ಸಹಕಾರದಿಂದ ಮತ್ತು ನನ್ನ ದುಡಿಮೆಯಿಂದ ಕೈಲಾದಷ್ಟು
ಸಹಾಯ ಮಾಡುತ್ತಿದ್ದೇನೆ. ಪ್ರತಿ ದಿನ 150 ಅಶಕ್ತರಿಗೆ ಊಟ ವಿತರಿಸುತ್ತಿದ್ದೇನೆ. ಹಿಂದಿನ ಲಾಕ್‌ಡೌನ್ ಅವಧಿಯಲ್ಲೂ ಆಹಾರದ ಪೊಟ್ಟಣ ವಿತರಿಸಿದ್ದೇನೆ’ ಎಂದು ಸಾಯಿನಾಥ ಶೇಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.