
ಪ್ರಜಾವಾಣಿ ವಾರ್ತೆ
ಬೈಂದೂರು: ಇಲ್ಲಿನ ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಇದೇ 14 ಮತ್ತು 15ರಂದು ವಾರ್ಷಿಕ ಹಾಲುಹಬ್ಬ, ಗೆಂಡಸೇವೆ ನಡೆಯಲಿದೆ.
14ರಂದು ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ತುಲಾಭಾರ ಸೇವೆ, ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9ರಿಂದ ಗೆಂಡಸೇವೆ ನಡೆಯಲಿದೆ. ಬಳಿಕ ಶ್ರೀಕ್ಷೇತ್ರ ಗೋಳಿಗರಡಿ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
15ರಂದು ಬೆಳಿಗ್ಗೆ ಹರಕೆ ಕಾಣಿಕೆ, ಹಣ್ಣುಕಾಯಿ, ತುಲಾಭಾರ ಸೇವೆ, ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.