ADVERTISEMENT

ಮುದ್ರಾ ಲೋನ್‌ ಕೊಡಿಸುವುದಾಗಿ ವೈದ್ಯಾಧಿಕಾರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 15:18 IST
Last Updated 21 ಆಗಸ್ಟ್ 2021, 15:18 IST

ಉಡುಪಿ: ಮುದ್ರಾ ಲೋನ್ ಕೊಡಿಸುವುದಾಗಿ ನಂಬಿಸಿದ ವಂಚಕರು ಶಿರ್ವದ ವೈದ್ಯಾಧಿಕಾರಿ ಡಾ.ಟಿ.ಕೃಷ್ಣಮೂರ್ತಿ ಅವರಿಂದ ₹ 67,650 ಪಡೆದು ವಂಚನೆ ಎಸಗಿದ್ದಾರೆ.

ಡಾ.ಕೃಷ್ಣಮೂರ್ತಿ ಅವರು ಮಗನ ಶಿಕ್ಷಣಕ್ಕಾಗಿ ಹಣವನ್ನು ಹೊಂದಿಸುವಾಗ ಮೊಬೈಲ್‌ಗೆ ಲೋನ್‌ ಕೊಡುವುದಾಗಿ ಸಂದೇಶ ಬಂದಿದೆ. ಲೋನ್‌ಗಾಗಿ ನಕಲಿ ಮುದ್ರಾ ಲೋನ್‌ ವೆಬ್‌ಸೈಟ್‌ನಲ್ಲಿ ಹೆಸರು ಹಾಗೂ ಫೋನ್ ನಂಬರ್ ನೋಂದಾಯಿಸಿದ್ದಾರೆ.

ಬಳಿಕ 9813024637 ಹಾಗೂ 9871668167 ನಂಬರ್‌ನಿಂದ ಕರೆಮಾಡಿದ ವಂಚಕರು ₹ 25 ಲಕ್ಷದವರೆಗೆ ಮುದ್ರಾ ಲೋನ್ ಕೊಡುವುದಾಗಿ ನಂಬಿಸಿ ಡಾ.ಕೃಷ್ಣಮೂರ್ತಿ ಅವರ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ತರಿಸಿಕೊಂಡಿದ್ದಾರೆ. ನಂತರ ಪ್ರೊಸೆಸಿಂಗ್ ಚಾರ್ಜ್ ಎಂದು ಜುಲೈ 13ರಿಂದ 16ರವರೆಗೆ ಹಲವು ಬಾರಿ ಗೂಗಲ್ ಪೇ ಮೂಲಕ ಹಂತ ಹಂತವಾಗಿ 67,650 ಹಣವನ್ನು ಖಾತೆಗೆ ಹಾಕಿಸಿಕೊಂಡಿದ್ದಾರೆ. ಬಳಿಕ ಕೃಷ್ಣಮೂರ್ತಿ ಅವರಿಗೆ ವಂಚನೆಯ ಅರಿವಾಗಿ ಸೆನ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.