ಬೈಂದೂರು: ಉಪ್ಪುಂದ ಗ್ರಾಮ ಪಂಚಾಯಿತಿ ಆಡಳಿತ ಸಮಯಕ್ಕೆ ಸರಿಯಾಗಿ ಸಭೆಗಳನ್ನು ನಡೆಸದೆ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡಿ ಸಾರ್ವಜನಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಉಪ್ಪುಂದ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಉಪ್ಪುಂದ ಗ್ರಾಮ ಪಂಚಾಯಿತಿ ಆಡಳಿತವು ಕಳೆದ ಕೆಲ ತಿಂಗಳುಗಳಿಂದ ಸಭೆ ನಡೆಸಲಿಲ್ಲ. ಇಂಥ ಧೋರಣೆ ಮುಂದುವರಿದರೆ ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ತಿಮ್ಮಪ್ಪ ಖಾರ್ವಿ, ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಸದಸ್ಯರಾದ ಶೇಖರ್ ಪೂಜಾರಿ, ಬಾಬು ದೇವಾಡಿಗ, ಮುಖಂಡರಾದ ಎಸ್.ಮದನ್ ಕುಮಾರ್, ಪ್ರಮೀಳಾ ದೇವಾಡಿಗ, ವಾಸುದೇವ ಪೂಜಾರಿ, ನಾಗರಾಜ ಉಪ್ಪುಂದ, ವೆಂಕಟರಮಣ ಖಾರ್ವಿ, ನಾಗೇಶ ಖಾರ್ವಿ, ಗಣಪತಿ ಖಾರ್ವಿ, ವಾಸು ಮೊಗವೀರ, ನಾರಾಯಣ ಆಚಾರ್ಯ, ಭಾಸ್ಕರ್ ಖಾರ್ವಿ, ರಾಮ ಬಬ್ರಿಮನೆ, ಮೋಹನ ಖಾರ್ವಿ, ನಾಗೇಶ್, ಹರಿಶ್ಚಂದ್ರ, ವಸಂತ ಪೂಜಾರಿ, ಪ್ರಭಾಕರ ಖಾರ್ವಿ, ಥಾಮಸ್ ರೋಡ್ರಿಗಸ್, ಮಾಧವ, ನಾಗೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.