ADVERTISEMENT

ಉಡುಪಿ | ಕೊರೊನಾ ಸೋಂಕು: ಕಂಟೈನ್‌ಮೆಂಟ್‌ ಝೋನ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 3:35 IST
Last Updated 6 ಜೂನ್ 2020, 3:35 IST
   

ಉಡುಪಿ: ಕೋವಿಡ್ ಸೋಂಕಿತರು ವಾಸವಿರುವ ಮನೆಗಳ ಸುತ್ತಲಿನ ಪ್ರದೇಶಗಳನ್ನು ಜಿಲ್ಲಾಡಳಿತ ಕಂಟೈನ್‌ಮೆಂಟ್ ಝೋನ್‌ಗಳನ್ನಾಗಿ ಮಾಡಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಯಾವ ಪ್ರದೇಶ ಕಂಟೈನ್‌ಮೆಂಟ್‌:

ಉಡುಪಿ ತಾಲ್ಲೂಕಿನ ಶೆಟ್ಟಿಬೆಟ್ಟು, ಬಡಗಬೆಟ್ಟು, ಪುತ್ತೂರು, ಪೆರ್ಣಂಕಿಲ, ಕೆಳಾರ್ಕಳ ಬೆಟ್ಟು, ಕುಂದಾಪುರ ತಾಲ್ಲೂಕಿನ ವಡ್ಡರ್ಸೆ, ಹಕ್ಲಾಡಿ, ಹೆಮ್ಮಾಡಿ,ಗಂಗೊಳ್ಳಿ, ದೇವಲ್ಕುಂದ, ಬಳ್ಕೂರು, ಕುಂದಬಾರಂಗಡಿ, ಹರ್ಕೂರು, ಬಸ್ರೂರು, ಹಾಲ್ನಾಡು, ಗುಜ್ಜಾಡಿ, ಕರ್ಕುಂಜೆ, ವಡೇರಹೋಬಳಿ, ಕೋಡಿ, ಕಾರ್ಕಳ ನಗರ, ಇನ್ನಾ, ಯರ್ಲಪಾಡಿ, ನಲ್ಲೂರು, ಕಾಪು ತಾಲ್ಲೂಕಿನ ಮೂಡಬೆಟ್ಟು, ಶಿರ್ವ, ಪಾಂಗಳ, ನಾಡ್ಸಾಲು, ಮಟ್ಟು, ಬೆಳಪು, ಬ್ರಹ್ಮಾವರದ ಹೆರೂರು, ಹಂದಾಡಿ, ವಂಡಾರು, ಕೋಟತಟ್ಟು, ಬೈಂದೂರಿನ ಬಡಾಕೆರೆ, ನಾವುಂದ, ಕೇರ್ಗಾಲು, ಯಳಜಿತ್, ಬಿಜೂರು, ಉಳ್ಳೂರು, ನಾಡ, ಯಡ್ತರೆ, ಗೋಳಿಹೊಳೆ, ಹೆಬ್ರಿಯ ನಾಡ್ಪಾಲು ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.